ಕಾರ್ಕಳ: ಕನ್ನಡಿಗ ಹಾಗೂ ಕೊಂಕಣಿ ಭಾಷಿಗರಾದ ಮೂಲತ: ಕಾರ್ಕಳ ತಾಲೂಕಿನ ನಕ್ರೆಯವರಾಗಿದ್ದು ಪ್ರಸ್ತುತ ಮುಂಬಯಿ ಅಂಧೇರಿ ನಿವಾಸಿ ವಸಂತ ಆರ್ ನಾಯಕ್, ಗೀತಾ ವಿ.ನಾಯಕ್ ರವರ ಏಕೈಕ ಪುತ್ರಿ ಪ್ರತಿಭಾನ್ವಿತೆ ಅಪೂರ್ವ ನಾಯಕ್, ಪರ್ಫೆಕ್ಟ್ ವಿಮೆನ್ ಮ್ಯಾಗಝಿನ್ ಸಂಸ್ಥೆಯವರು ಬಾಂಡ್ರಾ ಕಾಲೇಜು ಸಭಾಂಗಣದಲ್ಲಿ ಡಿಸೆಂಬರ್ 4ರಂದು ಏರ್ಪಡಿಸಿದ ಅಖಿಲ ಭಾರತ ಮಟ್ಟದ “ಪರೆಫೆಕ್ಟ್ ಮಿಸ್ ಇಂಡಿಯಾ-2015” ಸ್ಫರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿ “ಪರ್ಫೆಕ್ಟ್ ಮಿಸ್ ಇಂಡಿಯಾ-2015″ಕಿರೀಟ ಗೌರವಕ್ಕೆ ಪಾತ್ರರಾಗಿದ್ದಾರೆ.
ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ನೂರಾರು ಬೆಡಗಿಯರು ಈ ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದರು. 12 ನಿರ್ಣಾಯಕರು ಒಳಗೊಂಡಿದ್ದ ಈ ಸ್ಫರ್ಧೆಯಲ್ಲಿ ರ್ಯಾಪ್ ವಾಕ್, ಟ್ಯಾಲೆಂಟ್ ರೌಂಡ್, ವೇರ್ರೌಂಡ್, ವಿವಿಧ ಪ್ರತಿಭಾನ್ವಿತ ರೌಂಡ್ಸ್ ಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಜ್ಯೂರಿಯವರ ನಿರ್ಣಯಕ್ಕೆ ಪಾತ್ರರಾಗಿ ಈ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಕಳೆದ ಅಕ್ಟೋಬರ್ 8 ರಂದು ಝೆನ್ ಏಷ್ಯಾ ಫೌಂಡೇಶನ್ ನವರು ಬಾಂಡ್ರಾ ಪಶ್ಚಿಮ ಸೈಂಟ್ ಆ್ಯಂಡ್ರೂಸ್ ಅಡಿಟೋರಿಯಮ್ನಲ್ಲಿ ಆಯೋಜಿಸಿದ “ವರ್ಧಮಾನ್ ಫ್ಯಾಂಟಸಿ ಫೇಸ್ ಆಫ್ ದಿ ಇಯರ್-2015” ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಕಿರೀಟ ಧಾರಣೆ ಮಾಡಿ ನೆರದವರನ್ನು ಬೆರಗುಗೊಳಿಸಿದ್ದರು.
2012ರಲ್ಲಿ ಬಾಂಬೆ ಟೈಮ್ಸ್ ಮತ್ತು ಕ್ಲೀನ್ ಎಂಡ್ ಕ್ಲಿಯರ್ ಬ್ರ್ಯಾಂಡ್ ನವರು ಏರ್ಪಡಿಸಿದ ಮಹಾರಾಷ್ಠ್ರ ರಾಜ್ಯಮಟ್ಟದ “ಫ್ರೆಶ್ ಫೇಸ್-2012” ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. 20ರ ಹರೆಯದ ಅಪೂರ್ವ ನಾಯಕ್ ಬಾಲ್ಯದಿಂದಲೂ ಪ್ರತಿಭಾನ್ವಿತೆಯಾಗಿದ್ದು, ಭರತನಾಟ್ಯ, ಜಾನಪದನೃತ್ಯ, ಪಾಶ್ಚ್ಯಾತ್ಯನೃತ್ಯ, ಸಾಲ್ಸಾ, ಜೈವ್ನೃತ್ಯ, ನಾಟಕ ಹಾಗೂ ಪ್ರಬಂಧ ವಿವಿಧ ಪ್ರತಿಭಾನ್ವಿತ ಕ್ಷೇತ್ರಗಳಲ್ಲಿ ಭಾಗವಹಿಸಿ ಬಹುಮಾನಿತರಾಗಿದ್ದಾರೆ. ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಪೋಷಕರು, ಗುರುವೃಂದ ಹಾಗೂ ಶಿಕ್ಷಣ ಸಂಸ್ಥೆಯ ಪ್ರೀತಿವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಪ್ರಸ್ತುತ ಮುಂಬಯಿ ಜ್ಯೂಹು ನರ್ಸ್ ಮೊನ್ಜಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್(ಎನ್ಎಮ್ಐಎಮ್ಎಸ್) ಸಂಸ್ಥೆಯಲ್ಲಿ ಎಂಬಿಎ ಪಾರ್ಮಟೆಕ್ ವಿಭಾಗದಲ್ಲಿ ತೃತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ.