ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಸಿ.ಎನ್.ಸಿ ಯಂತ್ರಗಾರದಲ್ಲಿ ಡಿಪ್ಲೋಮ ಮತ್ತು ಐ.ಟಿ.ಐ ವಿದ್ಯಾರ್ಥಿಗಳಿಗೆ ಒಂದು ವಾರದ ಸಿ.ಎನ್.ಸಿ (ಲೆಥ್ & ಮಿಲ್ಲಿಂಗ್) ಕಾರ್ಯಾಗಾರ ಜರುಗಿತು.
ಆಳ್ವಾಸ್ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ (ಯಾಂತ್ರಿಕ) ವಿಭಾಗದ ಮುಖ್ಯಸ್ಥ ಪ್ರೊ. ಕೆ.ವಿ ಸುರೇಶ್, ಸಹಾಯಕ ಪ್ರಾಧ್ಯಾಪಕ ಪ್ರೊ. ಹೇಮಂತ್ ಸುವರ್ಣ, ಪ್ರೊ. ಪ್ರಮೋದ್ ಕುಮಾರ್ ಎನ್ ಹಾಗೂ ಪ್ರೊ. ಶ್ರೀವತ್ಸ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಸಿದ್ದಾಂತದ ಜೊತೆಗೆ ಪ್ರಾಯೋಗಿಕವಾಗಿ ಸಿ.ಎನ್.ಸಿ ಯಂತ್ರದ ಬಳಕೆಯ ಪ್ರಾತ್ಯಕ್ಷಿಕೆ ತರಬೇತಿಯನ್ನು ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಮೂಡುಬಿದರೆ ಆಳ್ವಾಸ್ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮುಖ್ಯ ಅತಿಥಿಯಾಗಿದ್ದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜೊತೆಗೆ ಕೌಶಲ್ಯ ಅಭಿವೃದ್ಧಿಗೆ ಗಮನ ಹರಿಸುವುದು ಮುಖ್ಯ ಎಂದರು.
ಆಳ್ವಾಸ್ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಕೆ.ವಿ ಸುರೇಶ್ ಸ್ವಾಗತಿಸಿದರು. ಪ್ರೊ.ಮುದ್ದುಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಹೇಮಂತ್ ಸುವರ್ಣ ವಂದಿಸಿದರು.