ಕಾಸರಗೋಡು: ಮೊಬೈಲ್ ಮಳಿಗೆಯಿಂದ ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟ೦ತೆ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಮಲಪ್ಪುರಂ ನ ಅಲಾವುದ್ದೀನ್ (38) ಎಂದು ಗುರುತಿಸಲಾಗಿದೆ. ನವಂಬರ್ 26ರಂದು ಕುಂಬಳೆಯಲ್ಲಿ ಮೊಬೈಲ್ ಮಳಿಗೆಯಿಂದ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ 13 ಮೊಬೈಲ್ ಗಳನ್ನೂ ಕಳವು ಗೈದ ಪ್ರಕರಣದ ಆರೋಪಿಯಾಗಿದ್ದಾನೆ. ಕಳವುಗೈದಿದ್ದ ಮೊಬೈಲ್ ಗಳನ್ನು ಈತ ಮಾರಾಟ ಮಾಡಿದ್ದನು.
ಸೈಬರ್ ಸೆಲ್ ತನಿಖೆಯಿಂದ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಈತ ಕೃತ್ಯದಲ್ಲಿ ನೇರವಾಗಿ ಶಾಮಿಲಾಗಿಲ್ಲ. ಕಳವುಗೈದ ಮೊಬೈಲ್ ಗಳನ್ನೂ ಈತ ಮಾರಾಟ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ . ಕೋಜಿಕ್ಕೋಡ್ ನ ಟ್ರಾವೆಲ್ ಏಜೆನ್ಸಿ ಯೊಂದರಿಂದ 16 ಲಕ್ಷ ರೂ. ಕಳವುಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಇದಲ್ಲದೆ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ . ಕೃತ್ಯದಲ್ಲಿ ಶಾಮಿಲಾದ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.