News Kannada

ಕರಾವಳಿ

ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ - 1 min read

ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ

ಮಂಗಳೂರು: ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಬಜಪೆ ಸಮೀಪದ ಎಕ್ಕಾರು  ಕೊಡಮಣಿತ್ತಾಯ ದೈವಸ್ಥಾನ ರಸ್ತೆಯ ತೋಡಿನಲ್ಲಿ  ಭಾಗಶಃ ಸುಟ್ಟು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಜಪ್ಪಿನಮೊಗರು ನಿವಾಸಿ ಉಷಾ ಶೆಟ್ಟಿ(29) ಮೃತ ಮಹಿಳೆ.  ನಗರದ ಖಾಸಗಿ ಸಂಸ್ಥೆಯಲ್ಲಿ 4 ವರ್ಷದಿಂದ ಕೆಲಸ ಮಾಡುತ್ತಿದ್ದ ಅವರು ಗುರುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ಎಲ್ಲೆಡೆ ಹುಡುಕಾಡಿದ್ದ ಮನೆಯವರು ಪತ್ತೆಯಾಗದೇ ಇದ್ದಾಗ ಗಂಡ ಅಶ್ವಿನ್ ಶೆಟ್ಟಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ವ್ಯಾಪಕ ಶೋಧ ನಡೆಸಲಾಗಿತ್ತು. ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನ ಎಲ್ಲಿದೆ, ಎಷ್ಟು ದೂರ ಇದೆ ಎಂಬಿತ್ಯಾದಿ ಮಾಹಿತಿಯನ್ನು ಉಷಾ ಅವರು ಗುರುವಾರ ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಸಹೋದ್ಯೋಗಿಗಳ ಜತೆ ವಿಚಾರಿಸಿ ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಕೆ ನಾಪತ್ತೆಯಾಗಿದ್ದಾಳೆ ಎಂಬ ಮಾಹಿತಿ ಬಂದಾಗ ಸಹೋದ್ಯೋಗಿಗಳು ಆಕೆ ಎಕ್ಕಾರು ಪರಿಸರದಲ್ಲಿ ಇರಬೇಕೆಂದು ಶಂಕಿಸಿದ್ದರು. ಹಾಗೆ ಕಚೇರಿಯ ಸಿಬಂದಿ ಎರಡು ತಂಡಗಳಲ್ಲಿ ಶೋಧ ಆರಂಭಿಸಿದ್ದರು. ಇದೇ ವೇಳೆ ಉಷಾ ಅವರ ಮೊಬೈಲ್‌ ಫೋನ್‌ ಎಕ್ಕಾರು ಪರಿಸರದಲ್ಲಿ ಇರುವ ಬಗ್ಗೆ ಮೊಬೈಲ್‌ ಟವರ್‌ ತೋರಿಸುತ್ತಿತ್ತು. ಹಾಗಾಗಿ ಎಕ್ಕಾರು ಕೇಂದ್ರವಾಗಿರಿಸಿಕೊಂಡು ಶೋಧ ನಡೆಸಲಾಗಿತ್ತು. ಶುಕ್ರವಾರ ಮಧ್ಯಾಹ್ನ ವೇಳೆಗೆ ರಿಕ್ಷಾ ಚಾಲಕರೊಬ್ಬರು ಎಕ್ಕಾರು ದೈವಸ್ಥಾನ ರಸ್ತೆಯ ತೋಡಿನಲ್ಲಿ ಈಕೆಯ ಮೃತದೇಹವನ್ನು ಪತ್ತೆ ಮಾಡಿದ್ದು, ಅವರು ವಿಷಯವನ್ನು ಪಂಚಾಯತ್‌ ಅಧ್ಯಕ್ಷರಿಗೆ ತಿಳಿಸಿದ್ದರು. ಪಂಚಾಯತ್‌ ಅಧ್ಯಕ್ಷರು ಬಜಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ದೇಹ ಭಾಗಶ: ಬೆಂಕಿಯಿಂದ ಸುಟ್ಟು ಹೋಗಿದೆ. ಶವದ ಸಮೀಪ ಪೆಟ್ರೋಲ್ ಬಾಟಲಿ ಹಾಗೂ ಆಕೆಯ ಬ್ಯಾಗ್ ಪತ್ತೆಯಾಗಿದೆ. ಪ್ರಕರಣವು ಇದೊಂದು ಆತ್ಮಹತ್ಯೆಯೇ ಅಥವಾ ಕೊಲೆಯಾಗಿರಬಹುದೇ ಎಂಬ ಜಿಜ್ಞಾಸೆಗೆ ಒಳಗಾಗಿದ್ದು, ಪೊಲೀಸರ ತನಿಖೆಯಿಂದಷ್ಟೇ ಇದರ‌ ನಿಗೂಢತೆ ಬೆಳಕಿಗೆ ಬರಬೇಕಾಗಿದೆ.

See also  ವರ್ಲಿ ವೈಭವದಲ್ಲಿ ನಳ ನಳಸುತ್ತಿದೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು