ಕಾಸರಗೋಡು: ಉದುಮ ಮಾ೦ಗಾಡ್ ನಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟ೦ತೆ ಸಂಚು ನಡೆಸಿದ್ದ ಬ್ಲಾಕ್ ಪಂಚಾಯತ್ ಸದಸ್ಯನೋರ್ವನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅನ್ವರ್ ಮಾ೦ಗಾಡ್ (36) ಎಂದು ಗುರುತಿಸಲಾಗಿದೆ. ಈತ ಕಾಂಗ್ರೆಸ್ ಕಾರ್ಯಕರ್ತನಾಗಿದ್ದಾನೆ. ಪ್ರಕರಣದಲ್ಲಿ ನೇರವಾಗಿ ಶಾಮೀಲಾಗಿದ್ದ ನಾಲ್ವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಇವರು ನೀಡಿದ ಮಾಹಿತಿಯಂತೆ ಅನ್ವರ್ ನನ್ನು ಬಂಧಿಸಲಾಗಿದೆ. ನವಂಬರ್ 11 ರಂದು ಘಟನೆ ನಡೆದಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೋರ್ವರ ಸೋಲಿಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಇಬ್ರಾಹಿಮ್ ಕಾರಣ ಎಂದು ಆರೋಪಿಸಿ ಕೃತ್ಯ ನಡೆಸಿತ್ತು. ಸುಮಾರು 20 ಲಕ್ಷ ರೂ. ನಷ್ಟ ಉಂಟಾಗಿತ್ತು. ಇಬ್ರಾಹಿಂ ಮತ್ತು ಮನೆಯವರು ಸಂಬಂಧಿಕರ ಮನೆಗೆ ತೆರಳಲಿದ್ದ ಸಂದರ್ಭದಲ್ಲಿ ಕೃತ್ಯ ನಡೆಸಲಾಗಿತ್ತು.