ಕಾರ್ಕಳ: ನಗರದ ಮೂವಿಪ್ಲಾನೆಟ್ ದಿಲ್ ವಾಲೆ ಚಿತ್ರಪ್ರದರ್ಶನಕ್ಕೆ ಭಜಗಂರದಳ ಕಾರ್ಯಕರ್ತರು ಅಡ್ಡಿ ಪಡಿಸಿದರು.
ಸೋಮವಾರ ಬೆಳಿಗ್ಗೆ ಸುಮಾರು 9ರ ವೇಳೆಗೆ ಚಿತ್ರಮಂದಿರದ ಮುಂದೆ ಭಜರಂಗದಳ ಕಾರ್ಯಕರ್ತರು ಮುತ್ತಿಗೆ ಹಾಕಿ ಶಾರೂಕ್ ಖಾನ್ ವಿರುದ್ಧ ಘೋಷಣೆ ಕೂಗಿದರು. ಪ್ರಚಾರಕ್ಕೆ ಅಳವಡಿಸಿದ ದಿಲ್ ವಾಲೆಯ ಭಿತ್ತಿಪತ್ರ, ಬ್ಯಾನರ್ ಗಳನ್ನು ಕಿತ್ತು ಹಾಕಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ನಗರ ಘಟಕದ ಅಧ್ಯಕ್ಷ ಅನಿಲ್ ಪ್ರಭು ನೇತೃತ್ವವಹಿಸಿದರು. ಪರಿಸ್ಥಿತಿ ಹದಗೆಡುವ ಸಾಧ್ಯತೆ ಕಂಡು ಬಂದಿರುವುದರಿಂದ ಚಿತ್ರಪ್ರದರ್ಶನ ರದ್ದುಗೊಳಿಸಲಾಯಿತು.