ಕೊಳ್ಳೇಗಾಲ: ತಾಲೂಕಿನ ಶಿಲುಬೆಪುರ ಗ್ರಾಮದ ಬಳಿ ಆನೆಯ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಜಮೀನಿನ ಪಾಳು ಬಾವಿಯೊಂದರಲ್ಲಿ ಆನೆಯ ದೇಹವನ್ನು ಹೊತು ಹಾಕಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ಹೊರತೆಗೆದು ಅಂತ್ಯಕ್ರಿಯೆ ನಡೆಸಿದ್ದಾರೆ.
ತಾಲ್ಲೂಕಿನ ಶಿಲುಬೆಪುರ ಗ್ರಾಮದ ಜಪಮಾಲೆ ಎಂಬಾತ ತನ್ನ ಜಮೀನಿನ ಸುತ್ತ ವಿದ್ಯುತ್ ತಂತಿ ಹರಿಸಿದ್ದ ಕಳೆದ 15 ದಿನಗಳ ಹಿಂದೆ ಆನೆಯು ವಿದ್ಯುತ್ ತಂತಿಗೆ ಸಿಲುಕಿ ಸತ್ತಿದೆ. ಇದರಿಂದ ಹೆದರಿದ ಜಪಮಾಲೆ ಆನೆ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಇದನ್ನು ತನ್ನ ಜಮೀನಿನ ಮುಂದೆ ನೀರಿಗಾಗಿ ತೆಗೆದಿದ್ದ 15 ಅಡಿ ಆಳದ ಬಾವಿಗೆ ಹಾಕಿದ್ದನು.
ಬಳಿಕ ಬಾವಿಗೆ ಮಣ್ಣು ತುಂಬುವಂತೆ ಜೆಸಿಬಿವೊಂದನ್ನು ಜಪಮಾಲೆ ಕರೆ ತಂದಿದ್ದಾನೆ. ಈ ಸಂಧರ್ಭದಲ್ಲಿ ಬಾವಿಯಿಂದ ದುರ್ವಾಸನೆ ಬಂದಿದೆ ಅನುಮಾನುಗೊಂಡ ಜೆಸಿಬಿ ಚಾಲಕ ಬಾವಿ ಯತ್ತ ದೃಷ್ಠಿ ಹಾಯಿಸಿದ್ದಾನೆ. ಅಲ್ಲಿ ಆನೆಯ ಕಳೇ ಬರಹ ಪತ್ತೆಯಾಗಿದೆ ಗಾಬರಿಕೊಂಡ ಜೆಸಿಬಿ ಚಾಲಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಮೃತ ಆನೆ ದೇಹವನ್ನು ಮೇಲೆ ಎತ್ತುವ ಕಾರ್ಯಾಚರಣೆ ಕೈಗೊಂಡು ಅಂತ್ಯಕ್ರಿಯೆ ನಡೆಸಿದ್ದಾರೆ.