ಕಾಸರಗೋಡು: ಎಲ್ ಐ ಸಿ ಏಜೆಂಟ್ ನ ಹಣ ಮತ್ತು ದಾಖಲೆ ಗಳನ್ನು ಒಳಗೊಂಡ ಬ್ಯಾಗ್ ನ್ನು ಕಳವುಗೈದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪೆರ್ಲ ವಾಣಿನಗರ ಅಂಬಿಕಾನದ ಮುಹಮ್ಮದ್ ಉಮ್ಮರ್ ( 60) ಎಂದು ಗುರುತಿಸಲಾಗಿದೆ. ಕಾಸರಗೋಡಿನ ಎಲ್ ಐ ಸಿ ಏಜೆಂಟ್ ಶಿವನಾರಾಯಣ ಶರ್ಮ ಎಂಬವರ ಬ್ಯಾಗ್ ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದೆ. ಶನಿವಾರ ಮಧ್ಯಾಹ್ನ ಘಟನೆ ನಡೆದಿತ್ತು. ನಗರದ ರಸ್ತೆ ಬದಿ ಬೈಕನ್ನು ನಿಲ್ಲಿಸಿ ಕಚೇರಿಗೆ ತೆರಳಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿತ್ತು. ಕೂಡಲೇ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಗಂಟೆಗಳ ಅವಧಿಯಲ್ಲೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ಯಾಗ್ ನಲ್ಲಿ ಡ್ರೈವಿಂಗ್ ಲೈಸನ್ಸ್, ಆರ್ ಸಿ. ಬುಕ್, ಎಲ್ ಐ ಸಿ ದಾಖಲೆ, 1100 ರೂ. ಮೊದಲಾದವುಗಳಿದ್ದವು.