News Kannada

ಕರಾವಳಿ

ಅಶ್ವತ್ಥಪುರ: ಬಾವಿಗೆ ಬಿದ್ದು ಮೃತಪಟ್ಟ ಬಾಲಕ - 1 min read

ಅಶ್ವತ್ಥಪುರ: ಬಾವಿಗೆ ಬಿದ್ದು ಮೃತಪಟ್ಟ ಬಾಲಕ

ಮೂಡುಬಿದಿರೆ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸುವ ಯತ್ನದಲ್ಲಿ ಆಯತಪ್ಪಿ ಬಾವಿಗೆ ಬಿದ್ದ ಬಾಲಕನೋರ್ವ ಮೃತಪಟ್ಟ ದುರ್ಘಟನೆ ಅಶ್ವತ್ಥಪುರ ಶ್ರೀ ಸೀತಾರಾಮ ದೇವಸ್ಥಾನ ಬಳಿ ನಡೆದಿದೆ.

12-yr-old falls in well in bid to save cat, dies-1
 ಸ್ಥಳೀಯ ಅನಿಲ್ ಶೆಟ್ಟಿ ಅವರ ಮಗ, ವಾಣಿವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಆದರ್ಶ ಶೆಟ್ಟಿ(12) ಮೃತ ಪಟ್ಟ ದುರ್ದೈವಿ. ಬಾವಿಗೆ ಬೆಕ್ಕು ಬಿದ್ದಿದೆ ಎಂದು ಚಿಂತಿತನಾದ ಬಾಲಕ ಮುಂಜಾನೆ 7 ಗಂಟೆ ಸುಮಾರಿಗೆ ಬಾವಿಗೆ ಇಳಿಯಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಈ ಯತ್ನದಲ್ಲಿ ಆತ ಆಯತಪ್ಪಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಈ ನಡುವೆ ಬಾಲಕ ನಾಪತ್ತೆಯಾಗಿರುವುದು ಮನೆಯವರ ಗಮನಕ್ಕೆ ಬಂದಿದೆ. ಕೂಡಲೇ, ಸ್ಥಳೀಯರೊಡನೆ ಸೇರಿ ಹುಡುಕಲು ಪ್ರಾರಂಭಿಸಿದಾಗ ಮನೆಯ ಬಾವಿ ಸಮೀಪ ಬಾಲಕನ ಚಪ್ಪಲಿಗಳು ಕಂಡಿವೆ.  ಬಾವಿಯಲ್ಲಿ ಹುಡುಕಿದಾಗ ಮೃತ ದೇಹ ಪತ್ತೆಯಾಗಿದೆ. ಮೂಡುಬಿದರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆದರ್ಶ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು ಶಾಲೆಯಲ್ಲಿ ಬುಧವಾರ ಬೆಳಗಿನಿಂದ ವಾರ್ಷಿಕೋತ್ಸವ ತಯಾರಿ ನಡೆದಿತ್ತು. ವಿದ್ಯಾರ್ಥಿಯ ಮರಣದ ಸುದ್ದಿ ತಿಳಿಯುತ್ತಲೇ ಕಾರ್ಯಕ್ರಮ ಮುಂದೂಡಲಾಗಿದೆ.  

ಆದರ್ಶನ ತಂದೆ ಅನಿಲ್ ಶೆಟ್ಟಿ ಕಲ್ಲಮುಂಡ್ಕೂರಿನಲ್ಲಿ ಸೆಕ್ಯೂರಿಟಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ವಿಮಲಾ ಅಶ್ವತ್ಥಪುರದ ಅಂಗನವಾಡಿ ಕೇಂದ್ರದ ಸಿಬ್ಬಂದಿಯಾಗಿದ್ದಾರೆ. ಈ ದಂಪತಿಯ ಹಿರಿಯ ಮಗ ಮೂಡುಬಿದರೆ ಸಮೀಪದ ಮಾರಿಗುಡಿ ಬಳಿ 3 ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈಗ ಆದರ್ಶನ ಅಗಲಿಕೆಯಿಂದ ಈ ಕುಟುಂಬ ತಮ್ಮ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಆಘಾತಕ್ಕೀಡಾಗಿದೆ.   

 

 

See also  ಜ್ಯುವೆಲ್ಲರಿ ದರೋಡೆ ಪ್ರಕರಣ: ಅಫ್ಘಾನಿಸ್ತಾನ ಪ್ರಜೆಗಳಿಬ್ಬರ ಸಹಿತ ಮೂವರ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು