News Kannada

ಕರಾವಳಿ

ಉಪ್ಪಳದಲ್ಲಿ ಗೂಂಡಾ ತಂಡಗಳ ನಡುವೆ ಗುಂಡಿನ ಕಾಳಗ - 1 min read

ಉಪ್ಪಳದಲ್ಲಿ ಗೂಂಡಾ ತಂಡಗಳ ನಡುವೆ ಗುಂಡಿನ ಕಾಳಗ

ಕಾಸರಗೋಡು: ಉಪ್ಪಳದಲ್ಲಿ ಗೂಂಡಾ ತಂಡಗಳ ನಡುವೆ ಗುಂಡಿನ ಕಾಳಗ ಮಂಗಳವಾರ ರಾತ್ರಿ ನಡೆದಿದ್ದು, ಮತ್ತೆ ಗೂಂಡಾ ತಂಡಗಳ ನಡುವಿನ ವೈಷಮ್ಯ ಬೀದಿಗೆ ಬಂದಿದೆ.

ಎರಡು ವಾಹನಗಳಿಗೆ ಗುಂಡು ತಗಲಿದ್ದು ಹಾನಿಗೊಂಡಿದೆ. ಕುಖ್ಯಾತ ಚೋರ ಕಾಲಿಯಾ ರಫೀಕ್ ಮತ್ತು ಕಸಾಯಿ ಅಲಿ ನೇತೃತ್ವದಲ್ಲಿ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ. ಕಳೆದ ಕೆಲ ದಿನಗಳಿಂದ ಉಪ್ಪಳ ಪರಿಸರದಲ್ಲಿ ಗೂಂಡಾ ತಂಡಗಳ ನಡುವೆ ವೈಷಮ್ಯ ಹೊಗೆಯಾಡುತ್ತಿದೆ. ಮಂಗಳವಾರ ರಾತ್ರಿ ಉಪ್ಪಳ ಕೈಕಂಬ ಬಳಿ ಘಟನೆ ನಡೆದಿದೆ.

ಘಟನೆ ಕಂಡ ಕೆಲವರು ಕೂಡಲೇ ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ವಾಹನಗಳನ್ನು ತೊರೆದು ಎರಡು ತಂಡಗಳು ಪರಾರಿಯಾಗಿವೆ. ವಾಹನಗಳನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವ್ಯಾಗನರ್ ಕಾಲಿಯಾ ರಫೀಕ್ ಎಂಬವನದ್ದಾಗಿದ್ದು, ಬೊಲೇರೋ ವಾಹನಕಸಾಯಿ ಅಲಿಯದ್ದೆಂದು ತಿಳಿದು ಬಂದಿದೆ. ಕೆಲ ಸಮಯದ ಬಳಿಕ ಉಪ್ಪಳದಲ್ಲಿ ಗೂಂಡಾ ತಂಡಗಳು ಮತ್ತೆ ಕಾಳಗಕ್ಕಿಳಿದಿದ್ದು, ನಾಗರಿಕರಲ್ಲಿ ಭಯ ಹುಟ್ಟಿಸಿದೆ.

ಈ ಎರಡೂ ಗೂಂಗಾ ತಂಡಗಳು ಹಲವಾರು ಕೊಲೆ, ಕೊಲೆಯತ್ನ, ಬೆದರಿಕೆ ಮೊದಲಾದ ಪ್ರಕರಣದಲ್ಲಿ ಪ್ರಮುಖ ಆರೋಪಗಳಿದ್ದು, ಇದೀಗ ಎರಡೂ ತಂಡಗಳು ಪರಸ್ಪರ ಕತ್ತಿಮಸೆಯುತ್ತಿರುವುದು ನಾಗರಿಕರನ್ನು ಭೀತಗೊಳಿಸಿದೆ.

See also  ಕುಂಬಳೆ ಶಿರಿಯ ಸೀರೆ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಲಕ್ಷಾಂತರ ರೂ. ಕಳ್ಳತನ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು