ಮಂಗಳೂರು: ಭೂಗತ ಪಾತಕಿ ಬನ್ನಂಜೆ ರಾಜನನ್ನು ಎರಡು ದಿನಗಳ ಮಟ್ಟಿಗೆ ಪಾಂಡೇಶ್ವರ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಜ.8ರ ತನಕ ಆತ ಪಾಂಡೇಶ್ವರ ಪೊಲೀಸ್ ಕಸ್ಟಡಿಯಲ್ಲಿದ್ದು ಪಿ.ಬಿ. ಡೇಸಾ ಕೊಲೆಯತ್ನ ಪ್ರಕರಣ ಸಹಿತ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ.
ಹಣಕ್ಕಾಗಿ ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ 2015 ಫೆಬ್ರವರಿಯಲ್ಲಿ ಬನ್ನಂಜೆ ರಾಜನನ್ನು ಮೊರೆಕ್ಕೊ ಪೊಲೀಸರು ಬಂಧಿಸಿದ್ದರು. ಭಾರತದ ವಿವಿಧ ರಾಜ್ಯಗಳಲ್ಲಿ ರಾಜನ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿದ್ದು, ಬಂಧನಕ್ಕಾಗಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು.