ಮಂಗಳೂರು: ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಎಂಟು ಮಂದಿ ಸಹಚರರನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿಗಳು ಗೌರೀಶ್,ಜಯೇಶ್,ನವೀನ್ ಶೆಟ್ಟಿ,ಪ್ರವೀಣ್ ಕುಮಾರ್ ,ಹರ್ಷಿತ್ ,ಗುರುಪ್ರಸಾದ್, ಸಚಿನ್ ಗೌಡ ಮತ್ತು ಪವನ್ ಶೆಟ್ಟಿ ಎನ್ನುವವರಾಗಿದ್ದಾರೆ. ಮರಕಡ ಬಳಿ ದರೋಡೆಯೊಂದಕ್ಕೆ ಹೊಂಚು ಹಾಕುತ್ತಿದ್ದ ವೇಳೆ ಪೊಲೀಸರ ಬಲೆಗೆ 6 ಆರೋಪಿಗಳು ಬಿದ್ದಿದ್ದಾರೆ. ಇನ್ನಿಬ್ಬರನ್ನು ಕೆಎಸ್ಆರ್ಟಿಸಿ ಬಸ್ಸ್ಟಾಂಡ್ ಬಳಿ ವಶಕ್ಕೆ ಪಡೆಯಲಾಗಿದೆ. ಬಂಧಿತರ ವಿರುದ್ದ ಪಾಂಡೇಶ್ವರ ಉರ್ವಾ ಪೊಲೀಸ್ ಠಾಣೆಗಳಲ್ಲಿ ಕೊಲೆ,ಕೊಲೆ ಯತ್ನ , ದರೋಡೆ ಸೇರಿದಂತೆ ವಿವಿಧ ಪ್ರಕರಣ ಗಳು ದಾಖಲಾಗಿವೆ.