ಉಡುಪಿ: ಕಳೆದ ಮೂರು ದಶಕಗಳಿಂದ ಕರಾವಳಿಯ ಉದ್ದಕ್ಕೂ ಅಂಜುವ ದಲಿತರಲ್ಲಿ ಸ್ವಾಭಿಮಾನಮೂಡಿಸಿ,ಗರ್ಜಿಸುವ ಧೈರ್ಯ ತುಂಬಿದ ದಲಿತ ಚಿಂತಕ,ಜನಪರ ಹೋರಾಡಗಾರರಾದ ಜಯನ್ ಮಲ್ಪೆಗೆ ಕೊರಿಯರ್ ಮೂಲಕ ಅಯ್ಯಪ್ಪ ವೃತಧಾರಿಯ ಬಟ್ಟೆ ಮತ್ತು ತುಳಸಿಮಾಲೆಯನ್ನು ಪಾರ್ಸೆಲ್ ಕಳುಹಿಸಿದ ವಿಚಿತ್ರ ಘಟನೆ ಸಂಭವಿಸಿದೆ.
ಉಡುಪಿಯ ದಲಿತ ಸಂಘರ್ಷ ಸಮಿತಿಯ ಕಛೇರಿಯ ವಿಳಾಸಕ್ಕೆ ಮೂಡುಬೆಳ್ಳೆಯ ತಿರ್ಲಪಲ್ಕೆ ನಿವಾಸಿಯಾದ ಅರುಣ ಎಂಬಾತ ಈ ಪಾರ್ಸೆಲ್ ಕಳುಹಿಸಿದ್ದಾನೆ. ದಲಿತ ಯುವತಿಯೊಬ್ಬಳನ್ನು ಪ್ರೀತಿಸುವ ನಾಟಕಮಾಡಿ ಆಕೆಯನ್ನು ವಂಚಿಸಿದಾತನ್ನು ಮದುವೆ ಮಾಡಿಸಿದ ಹಿನ್ನಲೆಯಲ್ಲಿ ಹತಾಶೆಗೊಂಡು ಈ ಪಾರ್ಸೆಲ್ ಕಳುಹಿಸಿರಬೇಕೆಂದು ಜಯನ್ ಮಲ್ಪೆ ತಿಳಿಸಿದ್ದಾರೆ.
ಮಲ್ಪೆಯ ನೆರ್ಗೆ ಚೆನ್ನಬಸವೇಶ್ವರ ಭಜನಾ ಮಂಡಳಿಯ ನಿವಾಸಿಯಾದ ದಲಿತ ಯುವತಿಯೊಬ್ಬಳನ್ನು ತಿರ್ಲಪಲ್ಕೆಯ ಅಣ್ಣುರವರ ಮಗ ಅರುಣ ಎಂಬಾತ ಫೇಸ್ ಬುಕ್ ಮೂಲಕ ಪರಿಚಯಿಸಿಕೊಂಡು ಪ್ರೀತಿಸತೊಡಗಿದ. ಪ್ರೀತಿ-ಪ್ರೇಮಕ್ಕೆ ತಿರುಗಿ,ಪ್ರೇಮ-ದಲಿತ ಯುವತಿಯನ್ನು ಗರ್ಭಿಣಿಯಾಗುವಲ್ಲಿ ತಲುಪಿತ್ತು. ವಿಷಯ ತಿಳಿದ ಹುಡುಗಿಯ ತಂದೆ-ತಾಯಿ ಅರುಣನಲ್ಲಿ ಮದುವೆ ಪ್ರಸ್ತಾಪ ಎತ್ತಿದಾಗ ನಿರಾಕರಿಸತೊಡಗಿದ. ಕಡೆಗೆ ಮಲ್ಪೆ ಪೋಲಿಸ್ ಠಾಣೆಗೆ ದೂರು ನೀಡಲಾಯಿತು. ಪೋಲಿಸರು ಅರುಣನನ್ನು ಕರೆಸಿ ವಿಚಾರಿಸಿದಾಗ ಮದುವೆಯಾಗಲು ಒಂದು ತಿಂಗಳ ಕಾಲಾವಕಾಶ ಕೇಳಿದ. ಹುಡುಗಿ ಕಡೆಯವರೂ ಒಪ್ಪಿಕೊಂಡರು. ಆದರೆ ತಿಂಗಳು ಕಳೆದರೂ ಅರುಣ ಮದುವೆಯಾಗುವ ಯಾವ ಲಕ್ಷಣವೂ ಕಾಣಲ್ಲಿಲ್ಲ. ಇತ್ತ ಮಲ್ಪೆ ಪೋಲಿಸರೂ ಇಲ್ಲಸಲ್ಲದ ನೆಪಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಕಡೆಗೆ ದಲಿತ ಯುವತಿ ಜಯನ್ ಮಲ್ಪೆಯವರ ಮನೆಗೆ ಬಂದು ತನ್ನ ಪ್ರೀತಿ-ಪ್ರೇಮದ ಕಥೆಹೇಳಿ ಕಣ್ಣೀರಿಟ್ಟು ಅರುಣನನ್ನು ಮದುವೆ ಮಾಡಿಸುವಂತೆ ಬೇಡಿಕೊಂಡಳು.
ಸ್ವಜಾತಿಯ ಹುಡುಗನೇ ಆಗಿದ್ದರಿಂದ ಆತನ ಮನೆಯವರಲ್ಲಿ ಜಯನ್ ಮಲ್ಪೆ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಕಡೆಗೆ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾದ ಅಣ್ಣಮಲೈ ಬಳಿ ಹುಡುಗಿ ಮತ್ತು ತಂದೆ ತಾಯಿಯನ್ನು ಕರೆದುಕೊಂಡು ಹೋಗಿ ಅರುಣ ವಂಚನೆ ಮಾಡುತ್ತಿರುವ ಬಗ್ಗೆ ದೂರು ನೀಡಲಾಯಿತ್ತು. ಈಕೆಯ ಕಥೆ ಕೇಳಿದ ಎಸ್.ಪಿ ಅಣ್ಣಮಲೈ ಆತ ಮದುವೆಯಾಗಿ ಇವಳಿಗೆ ಬಾಳುನೀಡುವ ಯಾವ ಲಕ್ಷಣವೂ ಕಾಣುತ್ತಿಲ್ಲ, ಹಾಗಾಗಿ ಜೈಲಿಗೆ ಕಳಿಸೋಣ ಎಂದರು. ಆದರೆ ಹುಡುಗಿ ಆಗಲೇ ನಾಲ್ಕೂ ತಿಂಗಳ ಗರ್ಭಿಣಿಯಾಗಿದ್ದಳು.
ಏನಾದರೂ ಮಾಡಿ ಅರುಣನ್ನು ಮದುವೆಮಾಡಿಸಲೇ ಬೇಕೆಂದು ನಿರ್ಧರಿಸಿದ ಜಯನ್ ಮಲ್ಪೆ ದಸಂಸದ ಕಾರ್ಯಕರ್ತರ ನೆರವಿನಿಂದ ಮಣಿಪಾಲದಲ್ಲಿ ಹಿಡಿದು ಮಲ್ಪೆ ಪೋಲಿಸರಿಗೆ ಒಪ್ಪಿಸುವಾಗ ಅರುಣ ಆಗಲೇ ಅಯಪ್ಪ ವೃತಧಾರಿಯಾಗಿದ್ದ. ತಾನು ಶಬರಿಮಲೆಗೆ ಹೋಗಿಬಂದು ಮದುವೆಯಾಗುವುದಾಗಿ ಮತ್ತೆ ಖ್ಯಾತೆ ತೆಗೆಯಳು ಪ್ರಾರಂಭಿಸಿದ. ಆದರೆ ಅವನ ಮೋಸದ ಮಾತಿಗೆ ಮನೆಹಾಕದ ಜಯನ್ ಮಲ್ಪೆ ಅಯ್ಯಪ್ಪಣ ವೃತಧಾರಿ ತೆಗೆಸಿ ಮದುವೆ ಮಾಡಿಸುವಲ್ಲಿ ಯಶಸ್ವಿಯಾದರು. ಇದರಿಂದ ಹತಾಶಗೊಂಡ ಅರುಣ ತಾನು ಶಬರಿಮಲೆಗೆ ಹೋಗಲೆಂದು ಅಯ್ಯಪ್ಪಣ ವೃತಧಾರಿ ಸಂದರ್ಭದಲ್ಲಿ ತೊಡಿಸಿಕೊಂಡಿದ್ದ ಕಪ್ಪು ಲುಂಗಿ, ಶ್ಯಾಲು ಮತ್ತು ತುಳಸಿ ಮಾಲೆಯನ್ನು ಜಯನ್ ಮಲ್ಪೆಗೆ ಕೊರಿಯರ್ ಮೂಲಕ ಕಳುಹಿಸಿ ಸೇಡು ತೀರಿಸಿಕೊಂಡಿದ್ದಾನೆ.
ಒಬ್ಬ ಪ್ರಾಮಾಣಿಕ ಹೋರಾಟಗಾರನಿಗೆ ಆರೋಪ,ಆಮಿಷ, ಬೆದರಿಕೆ ಇದೆಲ್ಲ ನಿತ್ಯದ ಸಂಗಾತಿ ಆದರೆ ಇಂತಹ ಘಟಣೆ ಕಳೆದ ಮೂವತ್ತು ವರ್ಷದಲ್ಲಿ ಪ್ರಥಮ ಎಂದಿರುವ ಜಯನ್ ಮಲ್ಪೆ ಅವನು ಕಳುಹಿಸಿರುವ ಬಟ್ಟೆಗಳನ್ನು ಭಿಕ್ಷುಕರಿಗೆ ನೀಡುವುದಾಗಿ ತಿಳಿಸಿದ್ದಾರೆ.