News Kannada
Wednesday, July 06 2022

ಕರಾವಳಿ

ಕಳವು ಪ್ರಕರಣ: ಅಂತಾರಾಜ್ಯ ಕಳ್ಳನ ಬಂಧನ - 1 min read

Photo Credit :

ಕಳವು ಪ್ರಕರಣ: ಅಂತಾರಾಜ್ಯ ಕಳ್ಳನ ಬಂಧನ

ಕಾಸರಗೋಡು: ಬದಿಯಡ್ಕ ಪೇಟೆಯಲ್ಲಿನ ಮೊಬೈಲ್ ಮಳಿಗೆಗೆ ಸೇರಿದಂತೆ ಹದಿಮೂರಕ್ಕೂ ಅಧಿಕ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಂತಾರಾಜ್ಯ ಆರೋಪಿಯೋರ್ವನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಚೆನ್ನಡ್ಕದ ಜುಬೈರ್ (27) ಎಂದು ಗುರುತಿಸಲಾಗಿದೆ. ತಿಂಗಳ ಹಿಂದೆ ಬದಿಯಡ್ಕದ ಮೊಬೈಲ್ ಮಳಿಗೆಗೆ ನುಗ್ಗಿ ಸುಮಾರು 2.5 ಲಕ್ಷ ರೂ. ಮೌಲ್ಯದ ಸೊತ್ತು ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಿ ವಿಚಾರಣೆ ಗೊಳಪಡಿಸಿದಾಗ ಹಲವು ಕೃತ್ಯಗಳು ಬೆಳಕಿಗೆ ಬಂದಿದೆ.

ಕಾಸರಗೋಡು, ವಿದ್ಯಾನಗರ, ಬದಿಯಡ್ಕ, ಬೇಕಲ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಠಾಣೆ ಗಳಲ್ಲಿ  ಹಲವಾರು ಅಧಿಕ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಸಹಚರರಿಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.  ಈ ಪೈಕಿ ಓರ್ವ ಕರ್ನಾಟಕ ಹಾಗೂ ಇನ್ನೋರ್ವ ಬದಿಯಡ್ಕ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಬಳಿಯಿಂದ ಕಳವಿಗೆ ಬಳಸಿದ್ದ ಕಬ್ಬಿಣದ ರಾಡ್ ನ್ನು ಹಾಗೂ ಎರಡು ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜನವರಿ ಒಂದರಂದು ಬದಿಯಡ್ಕ ಜಂಕ್ಷನ್ ನ  ರತೀಶ್ ಎಂಬವರ ಮೊಬೈಲ್ ಮಳಿಗೆಗೆ ನುಗ್ಗಿದ್ದ ಈತ  15  ಹೊಸ ಮೊಬೈಲ್, 15  ಹಳೆ ಮೊಬೈಲ್ , ರೀಚಾರ್ಜ್ ಕೂಪನ್ ಗಳು, 500 ರೂ. ನಗದು ಕಳವು ಮಾಡಲಾಗಿತ್ತು .  ಕಬ್ಬಿಣದ ರಾಡ್ ನಿಂದ ಶಟರ್ ಮುರಿದು ಕಳವು ನಡೆಸಲಾಗಿತ್ತು.  ಕಾಸರಗೋಡು ಜಿಲ್ಲೆಯಲ್ಲಿ ಈತನ ವಿರುದ್ದ  ಐದು ಕಳವು ಪ್ರಕರಣ ಹಾಗೂ ಕರ್ನಾಟಕದಲ್ಲಿ ಪೆಟ್ರೋಲ್ ಪಂಪ್, ಚಿನ್ನದಂಗಡಿ ದರೋಡೆ ಸೇರಿದಂತೆ  ಐದು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಮೂರು ತಿಂಗಳ ಹಿಂದೆ ಬದಿಯಡ್ಕ ಪೆರ್ಮುಖದ ಮನೆಯೊಂದಕ್ಕೆ ನುಗ್ಗಿ  ಒಂಭತ್ತು ಪವನ್  ಚಿನ್ನಾಭರಣ ಹಾಗೂ  ಆರು ಸಾವಿರ ರೂ. ನಗದು, ಪೆರ್ಲ ನವ್ಯ ಜುವೆಲ್ಲರಿಯಿಂದ ಒಂದು ಕಿಲೋ ಚಿನ್ನ, ಬೆಳ್ಳಿಯನ್ನು ಕಳವು ಮಾಡಿದ್ದನು. ನೆಲ್ಲಿಕುಂಜೆಯ ಮನೆಯೊಂದರಿಂದ 10 ಪವನ್ ಚಿನ್ನಾಭರಣ,  ಒಂದು ಮೊಬೈಲ್ ,  ಬಾರಡ್ಕದ ಮನೆಯೊಂದರಿಂದ ಮೂರು ಸಾವಿರ ರೂ. ನಗದು,  ಉಳಿಯತ್ತಡ್ಕದಲ್ಲಿ ಬೈಕ್ ನಲ್ಲಿ ಬಂದು ಮಹಿಳೆಯ ಕುತ್ತಿಗೆಯಿಂದ ಒಂದೂವರೆ ಪವನ್ ಚಿನ್ನಾಭರಣದ ಸರ, ವಿದ್ಯಾನಗರದಲ್ಲಿ ಮಹಿಳೆಯ  ಕುತ್ತಿಗೆಯಿಂದ 2.5 ಪವನ್ ಚಿನ್ನಾಭರಣ, ಇರಿಯನ್ನಿ ಇರಿಯಣ್ಣಿಯಲ್ಲಿ ವಿದ್ಯಾರ್ಥಿನಿಯ ಕುತ್ತಿಗೆಯಿಂದ ಒಂದೂವರೆ ಪವನ್ ಚಿನ್ನಾಭರಣ   ಕಸಿದು ಪರಾರಿಯಾದ ಪ್ರಕರಣದ ಆರೋಪಿಯಾಗಿದ್ದಾನೆ.

See also  ಫೇಸ್‌ಬುಕ್‌ ನಲ್ಲಿ ಹಿಂದೂ ದೇವಾಲಯಕ್ಕೆ ಅವಹೇಳನ: ಕ್ರಮಕ್ಕೆ ಎಸ್ಪಿಗೆ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು