ಉಳ್ಳಾಲ: ಕೇರಳ ರಾಜ್ಯಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಸಹಿತ ಆರು ಟಿಪ್ಪರ್ ಲಾರಿಗಳನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ನಾಟೆಕಲ್ ಎಂಬಲ್ಲಿ ನಡೆದಿದೆ.
ಮುಡಿಪುವಿನ ಆಶ್ರಫ್(30), ದೇರಳಕಟ್ಟೆಯ ನಾಸೀರ್(28), ಮೊಹಮ್ಮದ್ ಆಶ್ರಫ್(33), ನಿಸಾಮುದ್ಧೀನ್(27) ಬೋಳಿಯಾರ್ ಸಂಶುದ್ದೀನ್(29), ಎಂಬವರನ್ನು ಬಂಧನವಾಗಿದ್ದು, ಇತರ ಮೂವರು ಉಸ್ಮಾನ್, ಇಬ್ರಾಹಿಂ, ಶರೀಫ್ ಎಂಬವರು ಪರಾರಿಯಾಗಿದ್ದಾರೆ.
ಕಲ್ಲಾಪು ನೇತ್ರಾವತಿ ನದಿ ತೀರದಿಂದ ಮರುಳನ್ನು ಕಳವುಗೈದು ಸರಿಯಾದ ದಾಖಲಾತಿ ಇಲ್ಲದೆ, ಪರವಾನಿಗೆ ಇಲ್ಲದೆ ಆಕ್ರಮವಾಗಿ ಆರು ಲಾರಿಗಳಲ್ಲಿ ಮರುಳು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕೊಣಾಜೆ ಠಾಣಾಧಿಕಾರಿ ಅಶೋಕ್ ನೇತೃತ್ವದ ತಂಡ ನಾಟೆಕಲ್ ಸಮೀಪ ತಪಾಸಣೆ ನಡೆಸಿ ಲಾರಿ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.