ಕಾಸರಗೋಡು: ಸಿಪಿಐಎಂ ರಾಜ್ಯ ಸಮಿತಿ ನೇತ್ರತ್ವದಲ್ಲಿ ಪಾಲಿಟ್ ಬ್ಯುರೋ ಸದಸ್ಯ ಪಿಣರಾಯಿ ವಿಜಯನ್ ನೇತೃತ್ವದ ನವಕೇರಳ ಜಾಥಾಕ್ಕೆ ಇಂದು ಸಂಜೆ ಚಾಲನೆ ನೀಡಲಾಯಿತು.
ಉಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದದರು ಸಿಪಿಎಂ ಹಿರಿಯ ಮುಖಂಡ ಪ್ರಕಾಶ್ ಕಾರಟ್ ಜಾಥಾಕ್ಕೆ ಚಾಲನೆ ನೀಡಿದರು. ಪ್ರತಿಪಕ್ಷ ನಾಯಕ ವಿ.ಎಸ್ ಅಚ್ಯುತಾನಂದನ್, ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ವಿ ಗೋವಿಂದನ್, ಕೆ.ಜೆ ಥಾಮಸ್, ಸಂಸದ ಪಿ.ಕೆ ಬಿಜು, ಎ.ಸಂಪತ್, ಪಿ.ಕೆ ಸೈನಬಾ, ಶಾಸಕ ಕೆ.ಟಿ ಜಲೀಲ್, ಜಿಲ್ಲಾ ಕಾರ್ಯದರ್ಶಿ ಶಾಸಕರಾದ ಕೆ.ಕುನ್ಚಿರಾಮನ್, ಕೆ.ಪಿ ಸತೀಶ್ಚಂದ್ರನ್, ಮಾಜಿ ಶಾಸಕ ಸಿ.ಎಚ್ ಕುನ್ಚಂಬು, ಕೆ.ಆರ್ ಜಯಾನಂದ, ಅಬ್ದುಲ್ ರಜಾಕ್ ಚಿಪ್ಪಾರ್ ಮೊದಲಾದವರು ಉಪಸ್ಥಿತರಿದ್ದರು.
ಹುತಾತ್ಮ ಕುಟುಂಬದವರನ್ನು ಪಿಣರಾಯಿ ವಿಜಯನ್ ಶಾಲು ಹೊದಿಸಿ ಗೌರವಿಸಿದರು. ಜಾಥಾಕ್ಕೆ ಅಂದು ಸಂಜೆ ಐದು ಗಂಟೆಗೆ ಕಾಸರಗೋಡಿನಲ್ಲಿ ಸ್ವಾಗತ ನೀಡಲಾಗುವುದು.