News Kannada
Friday, July 01 2022

ಕರಾವಳಿ

ಕಾಶೀಮಠ ಶ್ರೀ ಸುದೀಂಧ್ರ ತೀರ್ಥ ಸ್ವಾಮೀಜಿ ವೃಂದಾವನಸ್ಥ - 1 min read

Photo Credit :

 ಕಾಶೀಮಠ  ಶ್ರೀ ಸುದೀಂಧ್ರ ತೀರ್ಥ ಸ್ವಾಮೀಜಿ ವೃಂದಾವನಸ್ಥ

ಮಂಗಳೂರು: ಶ್ರೀ ಕಾಶೀಮಠ ಸಂಸ್ಥಾನದ 20ನೇ ಯತಿಗಳಾಗಿದ್ದ ಶ್ರೀಮದ್ ಸುದೀಂಧ್ರ ತೀರ್ಥ ಸ್ವಾಮೀಜಿ(92) ಭಾನುವಾರ ಬೆಳಗ್ಗೆ ಹರಿದ್ವಾರದಲ್ಲಿ ವೃಂದಾವನಸ್ಥರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀಗಳ ಇಚ್ಛೆಯಂತೆ ಕೊನೆಯ ದಿನಗಳನ್ನು ಕಳೆಯಲು ಅವರನ್ನು ಹರಿದ್ವಾರದ ಆಶ್ರಮಕ್ಕೆ ಶುಕ್ರವಾರ ಏರ್‍ಆಂಬ್ಯುಲೆನ್ಸ್ ಮೂಲಕ ಸ್ಥಳಾಂತರಿಸಲಾಗಿತ್ತು. ಸ್ವಾಮೀಜಿಯವರ ಗೌರವಾರ್ಥ ಜಿಎಸ್ ಬಿ ಸಮುದಾಯದ ಬಹುತೇಕ ಎಲ್ಲ ಶಿಕ್ಷಣ ಹಾಗೂ ವಾಣಿಜ್ಯ ಮಳಿಗೆ, ಕಚೇರಿಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.

90 ವರ್ಷದ ತುಂಬು ಜೀವನ ನಡೆಸಿದ ಸ್ವಾಮೀಜಿಯವರಿಗೆ 1944ರಲ್ಲಿ ಸನ್ಯಾಸ ದೀಕ್ಷೆ ಯಾಗಿತ್ತು. 1949ರಲ್ಲಿ ಕಾಶೀ ಮಠಾಧೀಶರಾಗಿ ಪೀಠಾರೋಹಣ ಮಾಡಿದ ಸ್ವಾಮೀಜಿ ಏಳು ದಶಕಗಳ ಕಾಲ ಗೌಡ ಸಾರಸ್ವತ ಬ್ರಾಹ್ಮಣ ಸಮು ದಾಯದ ಧಾರ್ಮಿಕ ನೇತಾರರಾಗಿ ಸಮಾಜವನ್ನು ಧರ್ಮದ ಬೆಳಕಿನಲ್ಲಿ  ಮುನ್ನಡೆಸಿದರು.

ಕನ್ಯಾಕುಮಾರಿಯಿಂದ ಬದರೀನಾಥದ ತನಕ ಇಡೀ ಭಾರತವನ್ನು ಸಂದರ್ಶಿಸಿದ್ದ ಸ್ವಾಮೀಜಿ ಯವರು ಮನುಕುಲದ ಧಾರ್ಮಿಕ ಮತ್ತು ನೈತಿಕ ಉನ್ನತಿಗಾಗಿ ತನ್ನ ಬದುಕನ್ನು ಧಾರೆ ಎರೆದಿದ್ದರು. ಕರುಣೆ, ಅನುಕಂಪ, ಔದಾರ್ಯದ ಆಗರವಾಗಿದ್ದ ಶ್ರೀಗಳು ಶ್ರೀ ವ್ಯಾಸ-ರಘುಪತಿ ದೇವರ ಆರಾಧನೆಗೆ ಬದುಕನ್ನು ಅರ್ಪಿಸಿದ್ದರು.

See also  ಅಕ್ರಮ ಕಸಾಯಿಖಾನೆಗೆ ದಾಳಿ 2 ಕರುಗಳ ರಕ್ಷಣೆ, 1.38 ಕ್ವಿಂಟಾಲ್ ದನದ ಮಾಂಸ ವಶಕ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು