ಬಂಟ್ವಾಳ: ಆಕಸ್ಮಿಕವಾಗಿ ಉಂಟಾದ ಬೆಂಕಿ ಅವಘಡದಿಂದ ಕಳಂಜಿಮಲೆ 35 ಹೆಕ್ಟೇರ್ ರಕ್ಷಿತಾರಣ್ಯದಲ್ಲಿ 8.7ಎಕ್ರೆ ಕಾಡು ಪ್ರದೇಶ ಹೊತ್ತಿ ಉರಿದ ಘಟನೆ ಉಕ್ಕುಡ – ಕನ್ಯಾನರಸ್ತೆಯ ಆನೆಪದವು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕನ್ಯಾನದಿಂದ ವಿಟ್ಲಕಡೆಗೆ ಸಾಗುತ್ತಿದ್ದ ಬೈಕ್ ಸವಾರೊಬ್ಬರು ಆನೆಪದವು ಸಮೀಪ ರಸ್ತೆ ಬದಿಯಲ್ಲಿ ಬೆಂಕಿ ಉರಿಯುತ್ತಿರುವ ಬಗ್ಗೆ ಉಕ್ಕುಡ ಅರಣ್ಯ ಇಲಾಖೆ ಚೆಕ್ ಪೋಸ್ಟ್ ನಲ್ಲಿ ತಿಳಿಸಿದಾಗಲಷ್ಟೇ ಬೆಂಕಿ ಅವಘಢ ಬೆಳಕಿಗೆ ಬಂದಿದೆ. ತಕ್ಷಣ ವಿಟ್ಲ ಉಪವಲಯ ಅರಣ್ಯಾಧಿಕಾರಿ ಎಸ್ ಎನ್ ಲೋಕೇಶ್, ಅರಣ್ಯರಕ್ಷಕರಾದ ಪದ್ಮನಾಭ, ರವಿ ಅವರು ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದು, ಗಾಳಿಯಿಂದಾಗಿ ಬೆಂಕಿಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಗಿದ್ದು, ಅವರೂ ಸ್ಥಳಕ್ಕೆ ಧಾವಿಸಿ ಬಂದರಾದರೂ, ವಾಹನ ಸ್ಥಳಕ್ಕೆ ಹೋಗುವುದಿಲ್ಲ ಎಂಬ ನೆಪವೊಡ್ಡಿ ತುಂಬಾ ದೂರ ಉಳಿದರು ಎಂಬ ಆರೋಪಗಳು ಕೇಳಿ ಬಂದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಗಳ ನೇತೃತ್ವದಲ್ಲಿ, ಅಗ್ನಿಶಾಮಕದಳದ ಸಿಬ್ಬಂದಿಗಳು ಹಾಗೂ 500 ಕ್ಕೂಅಧಿಕ ಮಂದಿ ಸ್ಥಳೀಯ ನಿವಾಸಿಗಳು 5 ತಾಸಿನ ಸತತ ಕಾರ್ಯಾಚರಣೆಯ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.