ಬಂಟ್ವಾಳ: ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಹರೀಶ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ ರವಿರಾಜ್ ನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಅಹಮಾದಾಬಾದ್ ನಲ್ಲಿ ಬಂಧಿಸಿದ್ದಾರೆ.
ನ.12ರಂದು ಅಮಾಯಕ ಹರೀಶ್ ಪೂಜಾರಿಯನ್ನು ಹಳೇಗೇಟು ಬಳಿ ಚೂರಿಯಿಂದ ಇರಿದು ಹತ್ಯೆ ನಡೆಸಿದ ನಾಲ್ವರು ಆರೋಪಿಗಳ ಪೈಕಿ ಈತ ತಲೆಮರೆಸಿಕೊಂಡಿದ್ದ. ಪ್ರಕರಣಕ್ಕೆ ಸಂಬಂಧಿಸಿ ಭುವಿತ್ ಶೆಟ್ಟಿ, ಅಚ್ಯುತ್ ಹಾಗೂ ಮಿಥುನ್ ಪೂಜಾರಿಯನ್ನು ಬಂಧಿಸಲಾಗಿತ್ತು. ಈತನ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಬಲೆ ಬೀಸಿದ್ದರು. ಕೊನೆಗೂ ಗುಜರಾತ್ ನ ಅಹಮದಾಬಾದ್ ಜಿಲ್ಲೆಯ ವಸ್ತ್ರಾಪುರ ಎಂಬಲ್ಲಿ ಚಿಕ್ಕಪ್ಪ ರಮೇಶ್ ಮನೆಯಿಂದ ಬಂಧಿಸಿ ಕರೆತರಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.