ಕಾಸರಗೋಡು: ಕುಂಬಳೆಯಲ್ಲಿ ಕ್ಷೇತ್ರ ಉತ್ಸವದ ಸಂದರ್ಭದಲ್ಲಿ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಪಟ್ಟಂತೆ ಉತ್ತರಪ್ರದೇಶ ಮೂಲದ ಆರು ಮಂದಿ ಯುವಕರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅಬ್ದುಲ್ ಖಾದರ್ ಯಾನೆ ಸಲ್ಮಾನ್, ಮಜೀದ್, ಶಾನ್ ವಾಜ್, ನದೀಂ, ಮುಹಮ್ಮದ್ ರಹೀಬ್, ಪರ್ವೇಜ್ ಎಂದು ಗುರುತಿಸಲಾಗಿದೆ. ಇವರು ಕಾಸರಗೋಡು ಸುತ್ತಮುತ್ತ ವಸ್ತ್ರ ಮಾರಾಟ ಮಾಡುತ್ತಿದ್ದರು. ಜನವರಿ 17ರಂದು ರಾತ್ರಿ ಕುಂಬಳೆ ಸರಕಾರಿ ಹೈಸ್ಕೂಲ್ ಮೈದಾನ ಬಳಿ ಕುಂಬಳೆ ಕಳತ್ತೂರು ಕಾರಿಂಜೆಯ ಜಯಸೂರ್ಯ ಮತ್ತು ಸ್ನೇಹಿತ ಜಗದೀಶ್ (25) ಮೇಲೆ ಹಲ್ಲೆ ನಡೆಸಿದ್ದರು. ಮಹಿಳೆಯರ ಭಾವಚಿತ್ರ ಮೊಬೈಲ್ ನಲ್ಲಿ ಕ್ಲಿಕ್ಕಿಸುತ್ತಿದ್ದಾಗ ಪ್ರಶ್ನಿಸಿದ್ದಕ್ಕಾಗಿ ತಂಡವು ಹಲ್ಲೆ ನಡೆಸಿತ್ತು. ಕುಂಬಳೆಯ ವಸತಿ ಗ್ರಹದಿಂದ ಇವರನ್ನು ಬಂಧಿಸಲಾಯಿತು.