ಕಾರ್ಕಳ: ಕ್ರೈಸ್ತರು ಸಮಾಜದ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅನಾದಿಕಾಲದಿಂದಲೂ ಕಂಡುಬಂದಂತೆ ಚರ್ಚ್ ನ ಪರಿಸರದಲ್ಲಿ ವಿದ್ಯಾ ಸಂಸ್ಥೆ, ಸಭಾಂಗಣಗಳು ಇಂದಿಗೂ ಕಂಡು ಬರುತ್ತಿದ್ದು, ಶೈಕ್ಷಣಿಕ ಹಾಗೂ ಸಮಾಜಿಕ ಕ್ರಾಂತಿಗೆ ಕ್ರೈಸ್ತರ ಕೊಡುಗೆ ಅಪಾರವಾಗಿದೆ ಎಂದರು ಉಡುಪಿ ಧರ್ಮಕೇಂದ್ರದ ವಂದನೀಯ ಹೆರಾಲ್ಡ್ ಪಿರೇರಾ ಹೇಳಿದರು.
ಐತಿಹಾಸಿಕ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದಲ್ಲಿ ಜರುಗಿದ್ದ ವಾರ್ಷಿಕೋತ್ಸವ ಮಹೋತ್ಸವವದ ಮೊದಲ ದಿನದಂದು ಭಾತೃತ್ವ ಭಾನುವಾರದಂದು ಪರಮ ಪ್ರಸಾದ ಮೆರವಣಿಗೆ ಆಚರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಭಕ್ತಸಮುದಾಯಕ್ಕೆ ಆಶೀರ್ವನ ನೀಡಿ ಮಾತನಾಡಿ, ಪರಮ ಪ್ರಸಾದ ವಿಶಿಷ್ಠವಾದುದು. ಇದರಲ್ಲಿ ಭಾಗಿಯಾದವರು ಸಮಾಜದಲ್ಲಿ ಐಕ್ಯತೆಯೊಂದಿಗೆ ಜೀವನ ಸಾಗಿಸುವುದಕ್ಕೆ ದೇವರ ಇಚ್ಚೆಯಾಗಿದೆ. ಏಕತೆಯಿಂದ ಸಮಾಜದಲ್ಲಿ ಎಲ್ಲಾ ಧರ್ಮೀಯರೋಂದಿಗೆ ಬಾಳಿ ಬದುಕಬೇಕೆಂದು ಅವರು ಹೇಳಿದರು.
ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದಿಂದ ಹೊರಟ ದಿವ್ಯ ಪರಮ ಪ್ರಸಾದದ ಮೆರವಣಿಗೆಯು ಚೇತನ ಹಳ್ಳಿ ಮೈದಾನದ ವರೆಗೆ ಸಾಗಿ ಬಂತು. ಅಸಂಖ್ಯಾತ ಸಮಾಜ ಭಾಂದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಕ್ಕಳಿಗಾಗಿ ದಿವ್ಯ ಬಲಿಪೂಜೆ ಹಾಗೂ ಪ್ರಾರ್ಥನೆ ನಡೆಯಿತು. ಅತ್ತೂರು ಸಂತ ಲಾರೆನ್ಸ್ ಧರ್ಮಗುರು ವಂದನೀಯ ಜಾರ್ಜ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.