ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕೋತ್ಸವದ ಮಂಗಳವಾರ ತಡ ರಾತ್ರಿ ಮೈದಾನದಲ್ಲಿದ್ದ ತೊಟ್ಟಿಲಿಗೆ ಅಳವಡಿಸಿದ ಮೋಟಾರ್ ನ ಬೆಲ್ಟ್ ಮುರಿದು ಅದರ ನಿರ್ವಾಹಕ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಗುಲ್ಬರ್ಗದ ಅಝೀಝ್(25) ಎಂಬಾತ ಘಟನೆಯಲ್ಲಿ ಗಾಯಗೊಂಡಿದ್ದು, ಎಡಕಾಲಿಗೆ ಗಂಭೀರ ರೀತಿಯಲ್ಲಿ ಗಾಯ ಉಂಟಾಗಿದೆ. ವಿದ್ಯುತ್ಕರಣ ತೊಟ್ಟಿಲಿಗೆ ಅಳವಡಿಸಿದ ಮೋಟಾರಿನ ಬೆಲ್ಟ್ ತುಂಡರಿಸಿ ಹೋಗಿದ್ದು ಅದು ನಿರ್ವಾಹಕನ ಕಾಲು ಸುತಿಕೊಂಡಿರುವುದು ಘಟನೆಯಲ್ಲಿ ಗಾಯಗೊಳ್ಳಲು ಕಾರಣವಾಗಿದೆ.
ಕಳೆದ 10 ವರ್ಷಗಳಿಂದ ಅದೇ ಸಂಸ್ಥೆಯಲ್ಲಿ ದುಡಿಯುತ್ತಿದ್ದು, ಮೊದಲ ಬಾರಿಗೆ ತಾಂತ್ರಿಕ ವೈಫಲ್ಯ ಉಂಟಾಗಿದ್ದು, ಮೋಟಾರ್ ತಿರುಗುವಿಕೆಯ ವೇಗ 10 ಕಿ.ಮೀ ವೇಗ ಇತ್ತು ಎಂದು ಅಝೀಝ್ ಮಾಧ್ಯಮಕ್ಕೆ ತಿಳಿಸಿದ್ದಾನೆ.