News Kannada
Wednesday, July 06 2022

ಕರಾವಳಿ

ಭರವಸೆಯನ್ನು ಬಿಜೆಪಿ ಸರಕಾರ ಈಡೇರಿಸಿಲ್ಲ: ಸುಧಾಕರ ರೆಡ್ಡಿ - 1 min read

Photo Credit :

ಭರವಸೆಯನ್ನು ಬಿಜೆಪಿ ಸರಕಾರ ಈಡೇರಿಸಿಲ್ಲ: ಸುಧಾಕರ ರೆಡ್ಡಿ

ಕಾಸರಗೋಡು: ವಿಶ್ವದ ಎಲ್ಲಾ ವಿಚಾರಗಳ ಬಗ್ಗೆ ಟ್ವಿಟ್ ಮಾಡುವ  ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದಲ್ಲಿನ ಬೆಲೆಯೇರಿಕೆ ಕುರಿತು ಮಾತ್ರ ಇದುವರೆಗೂ ಟ್ವಿಟ್ ಮಾಡಿಲ್ಲ ಎಂದು ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್. ಸುಧಾಕರ ರೆಡ್ಡಿ ಅಭಿಪ್ರಾಯಪಟ್ಟರು.


 ಅವರು ಬುಧವಾರ ಸಂಜೆ  ಮಂಜೇಶ್ವರದ ಹೊಸಂಗಡಿಯಲ್ಲಿ  ಸಿಪಿಎಂ ಕೇರಳ ರಾಜ್ಯ ಕಾರ್ಯದರ್ಶಿ  ಕಾನಂ ರಾಜೇಂದ್ರನ್ ರಿಗೆ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ರಾಜ್ಯ ಮಟ್ಟದ ಜನಪರ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಬೆಲೆಯೇರಿಕೆಯಿಂದ ಜನತೆ  ದಿನದೂಡದಂತಾಗಿದೆ.  ಚುನಾವಣೆ ಸಂದರ್ಭದಲ್ಲಿ ನೀಡಿದ ಯಾವುದೇ ಭರವಸೆಯನ್ನು ಬಿಜೆಪಿ ಸರಕಾರ ಈಡೇರಿಸಿಲ್ಲ.  ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರಿಗೆ ತಲಾ ಹದಿನೈದು ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ ಮೋದಿ ಒಂದು ನಯಾ ಪೈಸೆಯನ್ನು ತರಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಮಾಜಿ ಸಚಿವ  ಬಿನೋಯ್ ವಿಶ್ವಂ, ಕೆ.ಪಿ ರಾಜೇಂದ್ರನ್ , ಪಣ್ಯನ್ ರವೀಂದ್ರನ್, ಶಾಸಕ ಇ. ಚಂದ್ರಶೇಖರನ್, ಗೋವಿಂದನ್ ಪಲ್ಲಿಕಾಪಿಲ್ ಮೊದಲಾದವರು ಉಪಸ್ಥಿತರಿದ್ದರು.

See also  ಆದರ್ಶ ಗ್ರಾಮ ಯೋಜನೆ: ಬಳ್ಪದಲ್ಲಿ ನಡೆಯುತ್ತಿದೆ ಬಿರುಸಿನ ಅಭಿವೃದ್ಧಿ ಕಾಮಗಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು