ಕಾರ್ಕಳ: ಐತಿಹಾಸಿಕ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಸಂಪನ್ನಗೊಂಡಿತು.
ಐದು ದಿನಗಳ ಕಾಲ ನಡೆದ ವಾರ್ಷಿಕೋತ್ಸವ ಸಂಭ್ರಮದಲ್ಲಿ ದೇಶ,ವಿದೇಶಗಳಿಂದ ಅಸಂಖ್ಯಾತ ಭಕ್ತಾದಿಗಳು ಪುಣ್ಯಕ್ಷೇತ್ರಕ್ಕೆ ಅಗಮಿಸಿ ದೇವರ ಕೃಪೆಗೆ ಪಾತ್ರರಾದರು. ಜಾತಿ-ಧರ್ಮ-ವರ್ಗ-ಭಾಷೆ-ಆರ್ಥಿಕ ಅಂತಸ್ತು ಇವೆಲ್ಲವನ್ನು ಎಲ್ಲೇ ಮೀರಿ ಭಕ್ತಾದಿಗಳು ಅಗಮಿಸಿರುವುದು ವಿಶೇಷವಾಗಿದೆ.
ಪ್ರಸಕ್ತ ವರ್ಷದ ವಾರ್ಷಿಕೋತ್ಸವ 42 ಬಲಿಪೂಜೆ ನಡೆದಿದೆ. ಮೂರು ಸಂಭ್ರಮ ಹಾಗೂ ಐದು ಧರ್ಮಾಧ್ಯಕ್ಷರು ಈ ಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ನಿಶಕ್ತರು, ರೋಗ ರುಜಿನದಿಂದ ಬಳಲುತ್ತಿದ್ದವರು, ವಿಕಲಚೇತನರು, ವೃದ್ಧರು, ಸಾಧುಗಳು ಶುಕ್ರವಾರ ಬೆಳಿಗ್ಗಿನಿಂದಲೇ ಸಾಲುಗಟ್ಟಲೆಯಲ್ಲಿ ಪುಣ್ಯಕ್ಷೇತ್ರದ ಮುಂಭಾಗದಲ್ಲಿ ನೆರೆದಿದ್ದರು ಬಿಕ್ಷೆಗಾಗಿ ಕಾಯುತ್ತಿದ್ದ ದೃಶ್ಯಾವಳಿ ಕಂಡುಬರುತ್ತಿತ್ತು.
ಪುಣ್ಯಕ್ಷೇತ್ರ ವಠಾರದಲ್ಲಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಭಿಕ್ಷಾಟನೆ ಮಾಡುವುದಕ್ಕೆ ಸಂಪೂರ್ಣ ನಿಷೇಧಿಸಲಾಗಿದ್ದು, ಭಿಕ್ಷಾ ದಾನ ನೀಡಲು ಬಯಸಿದವರಿಗಾಗಿ ಪುಣ್ಯ ಕ್ಷೇತ್ರದ ವಠಾರದಲ್ಲಿ ಭಾರೀ ಗಾತ್ರ ಮೂರು ಭಿಕ್ಷಾಪೆಟ್ಟಿಗೆಗಳನ್ನು ಇರಿಸಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಅದರಲ್ಲಿ ಶೇಖರಣೆಯಾಗಿರುವ ನಗದು ರೂ.10,84,000. ಅದನ್ನು ಒಟ್ಟು ಸೇರಿಸಿ ಮೂರು ವಿಭಾಗಗಳಾಗಿ ವಿಂಗಡಿಸಿ ಸಂಪೂರ್ಣ ವಿಕಲ ಚೇತನ ಹಾಗೂ ವೃದ್ಧಾಪ್ಯರಿಗೆ ತಲಾ ರೂ. 1000, ಅಲ್ಪ ಅಂಗವೈಕಲ್ಯಕ್ಕೊಳಗಾದವರಿಗೆ ರೂ.500, ಸಾಮಾನ್ಯ ಭಿಕ್ಷುಕರಿಗೆ ರೂ. 300ಗಳಂತೆ ಹಾಗೂ ತುಪ್ಪಅನ್ನದ ಪ್ಯಾಕೇಟ್ ವೊಂದನ್ನು ವಿತರಿಸುವ ಕಾರ್ಯ ಮಧ್ಯಾಹ್ನ 12ರ ವೇಳೆಗೆ ಆರಂಭಗೊಂಡಿತು. ಈ ಸಂದರ್ಭದಲ್ಲಿ ಬಹಳ ಸೂಕ್ಷ್ಮವಾಗಿ ಗಮನದಲ್ಲಿ ಇರಿಸಿದ ವಿತರಕರು ಯಾವುದೇ ಕಾರಣಕ್ಕೂ ಬಾಲ ಬಿಕ್ಷುಕರಿಗೆ ನಗದು ನೀಡದೇ ಕೇವಲ ಆಹಾರ ಪೊಟ್ಟಣ ಮಾತ್ರ ವಿತರಿಸಿದ್ದರು. ಈ ನಡುವೆ ಕೆಲವರು ಕುರುಡರಂತೆ ವರ್ತಿಸಿ ನಗದು ಸ್ವೀಕರಿಸಿರುವ ಅಂಶ ಕೂಡಾ ಬೆಳಕಿಗೆ ಬಂದಿದೆ.