News Kannada
Friday, July 01 2022

ಕರಾವಳಿ

ರಾಷ್ಟಮಟ್ಟದಲ್ಲಿ ಜನಜನಿತನಾದ ಸಾಣೂರು ಬಾಲಕ ಆಯುಷ್ - 1 min read

Photo Credit :

ರಾಷ್ಟಮಟ್ಟದಲ್ಲಿ ಜನಜನಿತನಾದ ಸಾಣೂರು ಬಾಲಕ ಆಯುಷ್

ಕಾರ್ಕಳ: ಸಾಣೂರು ಗ್ರಾಮೀಣಾ ಮಟ್ಟದ ಬಾಲಕನೊಬ್ಬ ಅಖಿಲ ಭಾರತ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಸ್ವರ್ಧೆಯಲ್ಲಿ ಪಾಲ್ಗೊಳುವುದರೊಂದಿಗೆ ಕ್ರೀಡಾ ಪ್ರದರ್ಶನ ತೋರ್ಪಡಿಸುವುದರ ಮೂಲಕ ಚಿನ್ನದ ಪದಕ ತನ್ನದಾಗಿರಿಸಿ ರಾಷ್ಟ್ರಮಟ್ಟದಲ್ಲಿ ತನ್ನ ಹೆಸರನ್ನು ಸ್ವರ್ಣಕ್ಷರದಲ್ಲಿ ದಾಖಲಿಸಿದ್ದಾನೆ.


ಕಾಂತಾವರ ಪ್ರಕೃತಿ ವಿದ್ಯಾ ಸಂಸ್ಥೆಯಲ್ಲಿ ಪ್ರಸಕ್ತ ಐದನೇ ತರಗತಿಯಲ್ಲಿ ಕಲಿಯುತ್ತಿರುವ ಆಯುಷ್.ಆರ್.ಶೆಟ್ಟಿ(11) ಈ ಸುದ್ದಿಯ ಕೇಂದ್ರ ಬಿಂದು. ಶ್ರೀರಾಮ್ ಪ್ರಕಾಶ್ ಶೆಟ್ಟಿ ಹಾಗೂ ಶಾಲ್ಮಿಲಿ ಶೆಟ್ಟಿಯ ಪುತ್ರನಾಗಿರುವ ಆಯುಷ್ ಚಿಕ್ಕ ವಯಸ್ಸಿನಲ್ಲಿಯೇ ಕ್ರೀಡೆಗೆ ಹೆಚ್ಚಿನ ಒಲವು ತೋರ್ಪಡಿಸುತ್ತಿದ್ದನು. ಅದಕ್ಕೆ ಹೆತ್ತವರ, ತರಬೇತುದಾರರ ಹಾಗೂ  ವಿದ್ಯಾ ಸಂಸ್ಥೆಯವರ ಪ್ರೋತ್ಸಾಹ ದೊರೆತಾಗ ತನ್ನ ಗುರಿ ತಲುಪಲು ಸಾಧ್ಯವಾಗಿದೆ.
 
ಸಾಧನೆಗಳ ಗರಿಗಳು
1.22-6-2013ರಿಂದ 23-06-2013ರ ವರೆಗೆ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಶಿಯೇಶನ್ರವರು ನಡೆಸಿದ 10ರ ವಯೋಮಿತಿಯಲ್ಲಿ ಪ್ರಥಮ.
2.11-09-2013 ವಯೋಮಿತಿಯಲ್ಲಿ ಉಡುಪಿಯಲ್ಲಿ ನಡೆದ 16ರ ವಯೋಮಿತಿಯಲ್ಲಿ ಪ್ರಥಮ.
3.22-02-2014ರಿಂದ 23-02-2014ರ ವರೆಗೆ ಮಂಗಳೂರಿನಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ 11ರ ವಯೋಮಿತಿಯಲ್ಲಿ ಪ್ರಥಮ.
413-09-2014 ರಿಂದ 15-09-2014ರ ವರೆಗೆ ಉಡುಪಿಯಲ್ಲಿ ನಡೆದ 16ರ ವಯೋಮಿತಿಯಲ್ಲಿ ದ್ವಿತೀಯ.
5. 10-10-2014 ರಿಂದ 12-10-2014ರ ವರೆಗೆ ಮಂಗಳೂರಿನಲ್ಲಿ ನಡೆದ ಅಂತರ್ಜಿಲ್ಲಾ ಮಟ್ಟದ 11ರ ವಯೋಮಿತಿಯಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ನಲ್ಲಿ ಪ್ರಥಮ.
6. 17-10-2014ರಿಂದ 19-10-2014 ರ ವರೆಗೆ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ 10ರ ವಯೋಮಿತಿಯಲ್ಲಿ ಪ್ರಥಮ.
7.25-10-2014ರಿಂದ 26-102014ರ ವರೆಗೆ ಮಂಗಳೂರಿನಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ 13ರ ವಯೋಮಿತಿಯಲ್ಲಿ ಸ್ವಿತೀಯ ಹಾಗೂ 15ರ ವಯೋಮಿತಿಯಲ್ಲಿ ದ್ವಿತೀಯ.

ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಸ್ವರ್ಧೆಯಲ್ಲಿ 10ರ ವಯೋಮಿತಿಯಲ್ಲಿ ಪ್ರಥಮ. ಉಡುಪಿಯಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ 10ರ ವಯೋಮಿತಿಯಲ್ಲಿ ಪ್ರಥಮ ಹಾಗೂ 13ರ ವಯೋಮಿತಿಯಲ್ಲಿ ದ್ವಿತೀಯ. ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ 11ರ ವಯೋಮಿತಿಯಲಲಿ ದ್ವಿತೀಯ. ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಷಟಲ್ಮಟ್ಟ ಬ್ಯಾಡ್ಮಿಂಟನ್ ಸ್ವರ್ಧೆಯಲ್ಲಿ ಕ್ವಾಟರ್ ಫೈನಲ್ ಪ್ರವೇಶ. ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಸ್ವರ್ಧೆಯಲ್ಲಿ 10 ರ ವಯೋಮಿತಿಯಲ್ಲಿ ಪ್ರಥಮ. ಹಳೆಯಂಗಡಿಯಲ್ಲಿ ನಡೆದ ರಾಜ್ಯ ಮಟ್ಟದ 13ರ ವಯೋಮಿತಿಯಲ್ಲಿ ಪ್ರಥಮ. ಉಜಿರೆಯಲ್ಲಿ ನಡೆದ ಜಿಲ್ಲಾ ಮಟ್ಟದ 16ರ ವಯೋಮಿತಿಯಲ್ಲಿ ಪ್ರಥಮ. ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ 11ರ ವಯೋಮಿತಿಯಲ್ಲಿ ಪ್ರಥಮ. ಉಜಿರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಥಮ. ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ 11ರ ವಯೋಮಿತಿಯಲ್ಲಿ ಪ್ರಥಮ ಹಾಗೂ 13ರ ವಯೋಮಿತಿಯಲ್ಲಿ ಪ್ರಥಮ. ಧಾರಾವಾಡದಲ್ಲಿ ನಡೆದ ರಾಜ್ಯ ಶಾಂಪಿಯನ್ ಶಿಫ್ ಸ್ವರ್ಧೆಯಲ್ಲಿ ತೃತೀಯ.ಮಂಗಳೂರಿನಲ್ಲಿ ನಡೆದ ಅಂತರ್ಜಿಲ್ಲಾ ಮಟ್ಟದ 13ರ ವಯೋಮಿತಿಯಲ್ಲಿ ಸಂಗಲ್ಸ್ ಹಾಘೂ ಡಬಲ್ಸ್ನಲ್ಲಿ ಪ್ರಥಮ. ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಸ್ವರ್ಧೆಯಲ್ಲಿ 16ರ ವಯೋಮಿತಿಯಲ್ಲಿ ತೃತೀಯ.ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ವರ್ಧೆಯಲ್ಲಿ 13 ವಯೋಮಿತಿಯಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ನಲ್ಲಿ ಪ್ರಥಮ ಹಾಗೂ 15 ವಯೋಮಿತಿಯಲ್ಲಿ ದ್ವಿತೀಯ. ಶವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಸ್ವರ್ಧೆಯಲ್ಲಿ 13ರ ವಯೋಮಿತಿಯಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ನಲ್ಲಿ ಪ್ರಥಮ. ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ಶಿಬಿರದಲ್ಲಿ ಭಾಗವಹಿಸಿ ಕರ್ನಾಟಕ ಬ್ಯಾಡ್ಮಿಂಟನ್ ತಂಡಕ್ಕೆ ಆಯ್ಕೆ.  16-01-2016ರಿಂದ 19-01-2016ರ ವರೆಗೆ ಚೆನೈನಲ್ಲಿ ನಡೆದ ಅಖಿಲ ಭಾರತ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಸ್ವಧರ್ೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿರುತ್ತಾನೆ.  

See also  ಜ.6ರಂದು ಎಂಸಿಸಿ ಬ್ಯಾಂಕ್ ನಲ್ಲಿ ಎನ್ ಆರ್ ಇ ಸೆಲ್ ಉದ್ಘಾಟನೆ

ಆಯುಷ್ ನ ತಾಯಿ ಶಾಲ್ಮಿಲಿ ಶೆಟ್ಟಿ ಕ್ರೀಡಾಪಟು. ಮಂಗಳೂರು ಸೈಂಟ್ ಅಗ್ನೇಸ್ ಸ್ಕೂಲ್ ನಲ್ಲಿ 1998ರ ವೇಳೆ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ರಾಜ್ಯ ಮಟ್ಟದ ಹೈಜಂಪ್ ಕ್ರೀಡೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದರು.

ಕಾರ್ಕಳದಲ್ಲಿ ಹುಡನ್ ಇನರ್ ಸ್ಟೇಡಿಯಂ ಇಲ್ಲ. ಹೀಗಾಗಿ ಷಟಲ್ ಬ್ಯಾಡ್ಮಿಂಟನ್ ಕ್ರೀಡೆಗಾಗಿ ಹೆಚ್ಚಿನ ತರಬೇತು ನೀಡುವ ಸಲುವಾಗಿ ವಾರಕ್ಕೆ ಎರಡು ಬಾರಿ ಮಂಗಳೂರಿಗೆ ತೆರಳಬೇಕಾಗಿದೆ. ಅಲ್ಲಿ ಚೇತನ್ ಎಂಬವರು ತರಬೇತಿ ನೀಡುತ್ತಿದ್ದಾರೆ. ಹಳೆಯಂಗಡಿಯಲ್ಲಿ ವಿವೇಕ್ ಎಂಬವರು ತರಬೇತಿ ನಿಡುತ್ತಿದ್ದಾರೆ. ಕಾರ್ಕಳದಲ್ಲಿ ಸುಭಾಸ್ ಜೈನ್ ಎಂಬವರು ತರಬೇತಿ ನೀಡುತ್ತಿದ್ದಾರೆ. ಮಂಗಳೂರಿಗೆ ಹೋಗಿ ಬರಲು ಹಣದ ಜೊತೆಗೆ ಸಮಯ ವ್ಯಯವಾಗುತ್ತಿದೆ. ಕ್ರೀಡಾಳುಗಳ ಅಗತ್ಯಗುನುಗುಣವಾಗಿ ತಾಲೂಕು ಪ್ರಮುಖ ಕೇಂದ್ರದಲ್ಲಿ ಸರಕಾರದ ವತಿಯಿಂದ ಹುಡನ್ ಇನರ್ ಸ್ಟೇಡಿಯಂ ಅಗತ್ಯವಿದೆ ಎಂದು ಆಯುಷ್ ತಂದೆ ಶ್ರೀರಾಮ್ ಪ್ರಕಾಶ್ ಶೆಟ್ಟಿ ಅಭಿಪ್ರಾಯಪಟ್ಟರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು