News Kannada
Thursday, July 07 2022

ಕರಾವಳಿ

ಉರುಸ್ ಗೆ ಸಾಗಲು ವಿಶೇಷ ಸೇತುವೆ - 1 min read

Photo Credit :

ಉರುಸ್ ಗೆ ಸಾಗಲು ವಿಶೇಷ ಸೇತುವೆ

ಮಂಗಳೂರು: ನೇತ್ರಾವತಿ ನದಿಯ ಮಧ್ಯೆಯಿರುವ ಸಣ್ಣದೊಂದು ದ್ವೀಪದಲ್ಲಿರುವ ಅಡ್ಯಾರ್ ಕಣ್ಣೂರಿನ ರಹ್ಮಾನಿಯ ಮಸ್ಜಿದ್ ವಠಾರದ ದರ್ಗಾದಲ್ಲಿ ಅಂತ್ಯ ವಿಶ್ರಮ ಹೊಂದಿರುವ ವಲಿಯುಲ್ಲಾಹ್ ಪುಣ್ಯ ಸ್ಮರಣೆ ಉರುಸ್ ವಿಜೃಂಭಣೆಯಿಂದ ಜರುಗಿತು.

Devotees throng Dargah for Uroos; cross river on bridge made of boats-1
ವರ್ಷಧಿಕೊಮ್ಮೆ ಎರಡು ದಿನಗಳ ಸಾಮೂಹಿಕ ಪ್ರಾರ್ಥನೆ ಮಾತ್ರ ಅಲ್ಲಿ ನಡೆಯುತ್ತದೆ. ಸಾವಿರಾರು ಮಂದಿ ಭಾಗವಹಿಸುತ್ತಾರೆ. ಅಲ್ಲಿಗೆ ಹೋಗಬೇಕಾದರೆ ದೋಣಿಯಲ್ಲೇ ಪಯಣಿಸಬೇಕು. ಆದರೆ ಈ ವಿಶೇಷ ದಿನಗಳಲ್ಲಿ ಮಾತ್ರ ದೋಣಿಗಳನ್ನೇ ಸೇತುವೆ ಮಾಡಿ ಭಕ್ತರು ಸಾಗುತ್ತಾರೆ.

64 ದೋಣಿಗಳನ್ನು ಅಕ್ಕ ಪಕ್ಕದಲ್ಲಿ ನಿಲ್ಲಿಸಿ ಅದರ ಮೇಲೆ ಮರದ ಹಲಗೆ ಹಾಕಿ ಈ ವಿಶೇಷ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ. ಸಮೀಪದಲ್ಲಿ ಮರಳುಗಾರಿಕೆ ನಡೆಸುವ ಮಂದಿ ಎರಡು ದಿನಗಳ ಮಟ್ಟಿಗೆ ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿ ತಮ್ಮ ದೋಣಿಗಳನ್ನು ಈ ಸೇತುವೆಗಾಗಿ ಒದಗಿಸಿದ್ದಾರೆ. 400 ವರ್ಷಗಳ ಇತಿಹಾಸವಿರುವ ಈ ದರ್ಗಾ ಶರೀಫ್‌ಗೆ ತೆರಳಲು ಕಳೆದ ವರ್ಷ ಮೊದಲ ಬಾರಿಗೆ ಈ ದೋಣಿ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು.

See also  ಬಾವಿಯಲ್ಲಿ ತೈಲಾಂಶ ಪತ್ತೆ ಪ್ರಕರಣ ಉಸ್ತುವಾರಿ ಸಚಿವ ಖಾದರ್ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು