News Kannada

ಕರಾವಳಿ

ಕ್ಷುಲ್ಲಕ ವಿಚಾರಕ್ಕೆ ದಾಂದಲೆ: ಓರ್ವ ಗಂಭೀರ - 1 min read

 ಕ್ಷುಲ್ಲಕ ವಿಚಾರಕ್ಕೆ  ದಾಂದಲೆ: ಓರ್ವ ಗಂಭೀರ

ಬಂಟ್ವಾಳ: ಕ್ಷುಲ್ಲಕ ವಿಚಾರಕ್ಕೆ ತಂಡವೊಂದು ದಾಂದಲೆ ನಡೆಸಿದ ಹಿನ್ನಲೆಯಲ್ಲಿ ಉಂಟಾದ ಅಹಿತಕರ ಘಟನೆಯಿಂದ ಹಲವಾರು ವಾಹನಗಳು ಜಖಂಗೊಂಡು ಒರ್ವ ವ್ಯಕ್ತಿ ಗಂಭೀರ ಸೇರಿದಂತೆ ಆರು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಸೋಮವಾರ ಸಂಜೆ ವೇಳೆಗೆ ಕಲ್ಲಡ್ಕದಲ್ಲಿ ನಡೆದಿದೆ.

Kalladka turns tense after clashes erupt over trivial reason-1ಘಟನೆ ಹಿನ್ನಲೆಯಲ್ಲಿ ಕಲ್ಲಡ್ಕ ಪರಿಸರದಲ್ಲಿ ಆತಂಕದ ವಾತವರಣ ಉಂಟಾಗಿದ್ದು ಕಲ್ಲಡ್ಕ ಸಂಪೂರ್ಣ ಬಂದ್ ಆಗಿದೆ. ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದ್ದು ಗಲಭೆ ನಿಯಂತ್ರಣಕ್ಕೆ ಬಂದಿದೆ.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೋಮಾವರ ಬೆಳಗ್ಗಿನಿಂದಲೇ ಮರು ಡಾಮಾರೀಕರಣ ಕಾಮಗಾರಿಯ ಹಿನ್ನಲೆಯಲ್ಲಿ ವಾಹನ ದಟ್ಟಣೆ ಉಂಟಾಗಿದ್ದು ಸಂಜೆಯವರೆಗೂ ಮುಂದುವರೆದಿತ್ತು. ಸಂಜೆ 7 ಗಂಟೆಯ ಸುಮಾರಿಗೆ ಟ್ರಾಫಿಕ್ ಜಾಂ ಸಂದರ್ಭದಲ್ಲಿ ಪಿಕಪ್ ವಾಹನವೊಂದು ಚಾಲಕ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ ಹಿಂಭಾಗಲ್ಲಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ.  ಇದೇ ವೇಳೆ ರಿಕ್ಷಾದಲ್ಲಿದ್ದ ಕಿರಣ್, ಮೋಹನ್, ರವಿ ಭಂಡಾರಿ ಹಾಗೂ ಇನ್ನೋರ್ವ ರಿಕ್ಷಾದಿಂದ ಇಳಿದು ಬಂದು ಪಿಕಪ್ ವಾಹನದ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.  ಈ  ವೇಳೆ ಪಿಕಪ್ ವಾಹನದ ಬಾಗಿಲು ಪಕ್ಕದಲ್ಲಿ ನಿಂತಿದ್ದ ಪುತ್ತೂರಿನ ಹೊಟೇಲ್ ಉದ್ಯಮಿ ಸುನೀಲ್ ಶೆಟ್ಟಿಯವರ ಕಾರಿಗೆ ತಾಗಿದೆ. ಈ ಸಂದರ್ಭ ಕಾರಿನ ಚಾಲಕ ಪ್ರಕಾಶ್ ಅವರು ಕಾರಿನ ಗ್ಲಾಸ್ ಕೆಳಗಿಳಿಸಿದ್ದನ್ನೇ ತಪ್ಪು ಎಂಬಂತೆ ಪ್ರಶ್ನಿಸಿದ ಆರೋಪಿಗಳು ಚಾಲಕ  ಪ್ರಕಾಶ್ ಹಾಗೂ ಸುನೀಲ್ ಶೆಟ್ಟಿಯವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಇದನ್ನು ಬಿಡಿಸಲು ಹೋದ ಸುನೀಲ್ ಅವರ ಪುತ್ರ ಸಿದ್ದಾಂತ್ ಅವರಿಗೂ ಹಲ್ಲೆ ನಡೆಸಿ ಕತಿನಲ್ಲಿದ್ದ ಚಿನ್ನದ ಸರವನ್ನು ದರೋಡೆಗೈದಿದ್ದಾರೆ. ಇದೇ ವೇಳೆ ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಆಲ್ಟೋ ಕಾರಿನ ಗಾಜನ್ನು ಆರೋಪಿಗಳು ಪುಡಿಗೈದು ಹಾನಿಗೊಳಿಸಿದ್ದಾರೆ.  ಕಾರಿನಲ್ಲಿದ್ದ ಸಂಪ್ಯ ನಿವಾಸಿ ಉಮೇಶ್ ಮತ್ತು ಗಣೇಶ್ ಎಂಬವರಿಗೆ ಗಾಯಗಳಾಗಿದೆ. ಈ ಬಗ್ಗೆ ಕಾರು ಚಾಲಕ ಸಂಟ್ಯಾರ್ ರಾಕೇಶ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆಯ ಬೆನ್ನಲ್ಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ದಾಂದಲೆ ನಡೆಸಿದ ಆರೋಪಿಗಳಿಗೆ ಹಲ್ಲೆ ನಡೆಸಿದ್ದಾರೆ. ಒಟ್ಟು ಪ್ರಕರಣ ಕೋಮು ಬಣ್ಣಕ್ಕೆ ತಿರುಗಿ ಪರಿಸ್ಥಿತಿ ಮತ್ತಷ್ಟು ಬಿಗುವಾಯಿತು. ಇದೇ ಪರಿಸ್ಥಿತಿಯ ಲಾಭ ಪಡೆದುಕೊಂಡು ಗುಂಪೊಂದು ಬಸ್ಸೊಂದಕ್ಕೆ ಸೋಡಾ ಬಾಟ್ಲಿಯಿಂದ ಹಾನಿಗೊಳಿಸಿದ್ದು ಬಸ್ಸಿನಲ್ಲಿದ್ದ ಮೈಸೂರು ನಿವಾಸಿ ಕೃಷ್ಣ ಭಟ್ (65) ಎಂಬವರ ಮುಖಕ್ಕೆ ಗಂಭೀರ ಗಾಯಗಳಾಗಿದೆ. ಇದೇ ವೇಳೆ ಸಮಯ ಪ್ರಜ್ಞೆ ಮೆರೆದ ಚಾಲಕ ಹೊನ್ನಪ್ಪ ಪಟೇಲ್, ನಿರ್ವಾಹಕ ಮತ್ತು ಸಹಪ್ರಯಣಿಕರು ಗಾಯಾಳುವನ್ನು ಬಿ.ಸಿ.ರೋಡಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಅಹಿತಕರ ಘಟನೆ ನಡೆದ ಬೆನ್ನಲ್ಲೇ ಕಲ್ಲಡ್ಕದ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಬಂಟ್ವಾಳ ಪ್ರಭಾಋ ಎಎಸ್ಪಿ ಭಾಸ್ಕರ್ ರೈ, ವೃತ್ತ ನಿರೀಕ್ಷಕ ಬೆಳ್ಳಿಯಪ್ಪ, ಗ್ರಾಮಾಂತರ ಠಾಣಾಧಿಕಾರಿ  ರಕ್ಷಿತ್ ಗೌಡ,  ನಗರ ಕ್ರೈಂ ಎಸೈ ಗಂಗಾಧರ್ ಮೊದಲಾದವರು ಸ್ಥಳದಲ್ಲಿದ್ದು, ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಪರಿಸ್ಥಿತಿ ಸಂಪೂರ್ಣ ಶಾಂತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

See also  ರಾಜ್ಯಮಟ್ಟದ ಸ್ಕೌಟ್ ದೇಶಭಕ್ತಿಗೀತೆ ಸ್ಪರ್ಧೆ: ಆಳ್ವಾಸ್ ನ ಮನುಜ ನೇಹಿಗ ದ್ವಿತೀಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು