News Kannada
Friday, July 01 2022

ಕರಾವಳಿ

ಕಲ್ಲಡ್ಕದಲ್ಲಿ ವೃದ್ಧ ದಂಪತಿಯ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು - 1 min read

Photo Credit :

ಕಲ್ಲಡ್ಕದಲ್ಲಿ ವೃದ್ಧ ದಂಪತಿಯ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು

ಬಂಟ್ವಾಳ: ಕಲ್ಲಡ್ಕದಲ್ಲಿ ನಿನ್ನೆ ನಡೆದ ವಾಹನ ಅಪಘಾತ ಘಟನೆಯಿಂದಾಗಿ ಭಿನ್ನಕೋಮಿನವರ ಮಧ್ಯೆ ಗುಂಪು ಘರ್ಷಣೆ ಸಂಭವಿಸಿದ ನಂತರ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿ ಬರುತ್ತಿದ್ದ ವೃದ್ಧ ದಂಪತಿಯರ ಮೇಲೆ ಹಲ್ಲೆ ನಡೆದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.


ಅಹ್ಮದಾಕ(75) ಮರಿಯಮ್ಮ(65) ಹಲ್ಲೆಗೊಳಗಾದ ದಂಪತಿಗಳು. ಈ ವೃದ್ಧ ದಂಪತಿಗಳ ಮೇಲೆ ಸ್ಥಳೀಯ ದುಷ್ಕರ್ಮಿಗಳು ಹಲ್ಲೆಗೈದಿದ್ದು, ಇದೀಗ ಮಂಗಳೂರಿನ ಹೈಲಾಂಡ್ ಆಸ್ಪತ್ರೆಯಲ್ಲಿನ ತೀವ್ರ ನಿಗಾಘಟಕದಲ್ಲಿ ಒಳ ರೋಗಿಗಳಾಗಿ ದಾಖಲಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ದ.ಕ ಜಿಲ್ಲಾ ಮುಸ್ಲೀಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್, ಸದಸ್ಯ ಪ್ರತಿನಿಧಿಗಳಾದ ಹಮೀದ್ ಕುದ್ರೋಳಿ, ಸಿ.ಎಂ. ಮುಸ್ತಾಫಾ, ಯು.ಎನ್. ಬಾವ ಉಳ್ಳಾಲ, ಮೂದಿನ್ ಮೋನುರವರು ಆಸ್ಪತ್ರೆಗೆ ಭೇಟಿ ನೀಡಿ ದಂಪತಿಗಳಿಗೆ ಸಾಂತ್ವಾನ ಹೇಳಿದರು.

ವೃದ್ದರ ಮೇಲಿನ ಹಲ್ಲೆಯನ್ನು ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಮತ್ತು ದುಷ್ಕರ್ಮಿ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನಿನಡಿಯಲ್ಲಿ ಶಿಕ್ಷಿಸಬೇಕೆಂದು ಆಗ್ರಹಿಸುತ್ತದೆ. ಇಂತಹ ನೀಚ ಕೃತ್ಯಗಳನ್ನು ಎಸಗುವುದರಿಂದ ದುಷ್ಕರ್ಮಿಗಳು ಸಾರ್ವಜನಿಕ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿರುವುದು ಖೇದಕರ ಎಂದು ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶೋಕ್ ಆಕ್ರೋಶ ವ್ಯಕ್ತ ಪಡಿಸಿದರು.

See also  ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್ ಸೇರ್ಪಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು