News Kannada

ಕರಾವಳಿ

ಗಲ್ಫ್ ಉದ್ಯೋಗಿಯ ಮನೆಗೆ ನುಗ್ಗಿದ ಕಳ್ಳ: ಸಿಸಿಟಿವಿಯಲ್ಲಿ ಸೆರೆ - 1 min read

ಗಲ್ಫ್ ಉದ್ಯೋಗಿಯ ಮನೆಗೆ ನುಗ್ಗಿದ ಕಳ್ಳ: ಸಿಸಿಟಿವಿಯಲ್ಲಿ ಸೆರೆ

ಕಾಸರಗೋಡು: ಗಲ್ಫ್ ಉದ್ಯೋಗಿಯ ಮನೆಯಿಂದ ಕಳವಿಗೆತ್ನಿಸಿ ರಾಜಕೀಯ ಪಕ್ಷದ ಪ್ರಮುಖ ಮುಖಂಡನೋರ್ವ ಸಿಕ್ಕಿಬಿದ್ದ ಘಟನೆ ತ್ರಿಕ್ಕರಿಪುರದಲ್ಲಿ ನಡೆದಿದ್ದು, ಈತನ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

CPM Neta turns thief in the night!-1ಕೈಕೊಟ್ಟುಕಡವಿನ ಗಲ್ಫ್ ಉದ್ಯೋಗಿ ಯೂನಸ್ ರವರ ಮನೆಗೆ ನುಗ್ಗಿ ಕಳವಿಗೆತ್ನಿಸಲಾಗಿದೆ.  ಸಿಪಿಎಂ ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಸಿ.ರಾಘವನ್ ಕಳವಿಗೆತ್ನಿಸಿದ ಆರೋಪಿಯಾಗಿದ್ದಾನೆ. ಯೂನಸ್ ಮತ್ತು ಕುಟುಂಬದವರು ಗಲ್ಫ್ ನಲ್ಲಿದ್ದಾರೆ.  ಸಂಬಂಧಿಕರು ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ಆದಿತ್ಯವಾರ ಮನೆಗೆ ಬಂದು ತೆರಳಿದ್ದರು. ಸೋಮವಾರ ಬೆಳಿಗ್ಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಮನೆಯ ಮುಂಬಾಗಿಲು ಮುರಿದು ಒಳನುಗ್ಗಿ  ಕಪಾಟುಗಳನ್ನು ತೆರೆದು ವಸ್ತ್ರ ಹಾಗೂ ಇತರ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಲಾಗಿದೆ.  ಸಿಸಿಟಿವಿ ಕ್ಯಾಮರದಲ್ಲಿನ  ದೃಶ್ಯ ಗಮನಿಸಿದಾಗ ರಾಘವನ್ ಕೃತ್ಯ ನಡೆಸುತ್ತಿರುವುದು ಕಂಡುಬಂದಿದೆ.  ಕಬ್ಬಿಣದ ರಾಡ್ ಬಳಸಿ ಬಾಗಿಲನ್ನು ಮುರಿದು ಒಳನುಗ್ಗಿರುವ ದೃಶ್ಯ  ಕಂಡು ಬರುತ್ತಿದೆ.  

ಚಂದೇರ ಪೊಲೀಸರಿಗೆ ದೂರು ನೀಡಲಾಗಿದ್ದು, ರಾಘವನ್ ತಲೆಮರೆಸಿಕೊಂಡಿದ್ದಾನೆ. ಯೂನಸ್ ಮತ್ತು ಕುಟುಂಬದವರು ಇತ್ತೀಚೆಗೆಷ್ಟೇ ಊರಿಗೆ ಬಂದು ಮರಳಿದ್ದರು. ಇದರಿಂದ ಮನೆಯಲ್ಲಿ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳಿರಬಹುದು ಎಂಬ ಶಂಕೆಯಿಂದ ಈತ ಕಳವಿಗೆತ್ನಿಸಿರಬಹುದು ಎಂದು ಅನುಮಾನಿಸಲಾಗಿದೆ. ಮೇಲ್ನೋಟಕ್ಕೆ ಯಾವುದೇ ಬೆಲೆಬಾಳುವ ವಸ್ತು ಕಳವಾಗಿಲ್ಲ, ಆದರೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಯೂನಸ್ ನ ಸಂಬಂಧಿಕರು ತಿಳಿಸಿದ್ದಾರೆ.

ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಸಿಪಿಎಂ ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಸಿ.ರಾಘವನ್ ನನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಈ ಕುರಿತು ಸಿಪಿಎಂ ಜಿಲ್ಲಾ ಸಮಿತಿ ಶಿಸ್ತು ಕ್ರಮ  ತೆಗೆದುಕೊಂಡಿದೆ.

ಸಿಸಿಟಿವಿಯಲ್ಲಿ ಸೆರೆಯಾದ ವೀಡಿಯೋ:

See also  ಅಕ್ರಮ ಮದ್ಯ ಮಾರಾಟ ಪತ್ತೆ: ಆರೋಪಿಯ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು