ಕಾರ್ಕಳ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಅನುಷ್ಠಾನಗೊಂಡ ರಸ್ತೆಯು ಆರು ವರ್ಷ ಪೊರೈಸುವ ಮುನ್ನವೇ ಸಂಪೂರ್ಣ ಮಾಯವಾದ ಹಿನ್ನಲೆಯಲ್ಲಿ ಆಕ್ರೋಶಗೊಂಡ ನಾಗರಿಕರು ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಈದು ಗ್ರಾಮದ ನೂರಾಲ್ಬೆಟ್ಟು ಎಂಬಲ್ಲಿ ಮುಂದಾಗಿದ್ದಾರೆ.
ಸಚಿವಾಲಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಭಾರತ ಸರಕಾರವು ಯೋಜನೆಯ ಹಣಕಾಸು ನೆರವಿನೊಂದಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯು 2002 ಡಿಸೆಂಬರ್ 5ರಂದು ಕಾಮಗಾರಿ ಆರಂಭಗೊಂಡಿತು. 2.28 ಕಿ.ನೀ ಉದ್ದದ ರಸ್ತೆ ನಿರ್ಮಾಣಕ್ಕೆ ರೂ. 25 ಲಕ್ಷ ತಗುಲಿದೆ. ಕರ್ನಾಟಕ ಸರಕಾರ ಭೂಸೇವಾ ನಿಗಮ ನಿಯಮಿತವು ನಿರ್ಮಣ ಕಾಮಗಾರಿ ವಹಿಸಿಕೊಂಡಿತ್ತು. ಐದು ವರ್ಷಗಳ ಕಾಲ ಆ ಸಂಸ್ಥೆಯು ಕಾಮಗಾರಿಯ ನಿರ್ವಹಣೆ ನಡೆಸಿತ್ತಾದರೂ ಆರನೇ ವರ್ಷ ಪೊರೈಸುವ ಮುನ್ನವೇ ಡಾಂಬರೀನಿಂದ ಜಲ್ಲಿಕಲ್ಲು ಸಂಪೂರ್ಣ ಬೇರ್ಪಟ್ಟು ನಾಮಕಾವಸ್ತೆಗೆ ತಲುಪಿದೆ.
ತೃಪ್ತಿಕರವಲ್ಲದ ಕಾಮಗಾರಿ ಆರಂಭವಾದ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು ಸಂಬಂಧ ಪಟ್ಟ ಇಲಾಖೆಗೆ ಹಾಗೂ ಜನಪತ್ರಿನಿಧಿಗಳಿಗೆ ದೂರು ಸಲ್ಲಿಸಿದ್ದರು. ಹಣದ ಹಾಗೂ ಅಧಿಕಾರ ಪ್ರಭಾವದ ಮುಂದು ನಾಗರಿಕರ ಆಕ್ಷೇಪಕ್ಕೆ ಕವಡೆ ಕಾಸಿನ ಬೆಲೆ ಸಿಗದೇ ಹೋದುದರಿಂದ ಹಲವು ಸಂಕಷ್ಟಗಳು ಅಲ್ಲಿನ ನಾಗರಿಕರು ಎದುರಿಸುವಂತಾಗಿದೆ.
ಧರ್ಮಸ್ಥಳ-ಶೃಂಗೇರಿ ಸಂಪರ್ಕಿಸುವ ರಸ್ತೆ ಈದು ನೂರಾಲ್ಬೆಟ್ಟು ಆಗಿತ್ತು. ಈದು ನೂರಾಲ್ಬೆಟ್ಟು ಇಕ್ಕೆಲೆಗಳಲ್ಲಿ ಕರ್ನಾಟಕ ಅರಣ್ಯ ಇಲಾಖೆಗೆ ಅಧೀನದಲ್ಲಿ ಇರುವ ಹುರಬೆ ಮೀಸಲು ಅರಣ್ಯ ಇದೆ. ಈ ಕಾರಣದಿಂದ ನೂರಾಲ್ಬೆಟ್ಟುನಿಂದ ಹಾದು ಹೋಗುವಂತಹ ಧರ್ಮಸ್ಥಳ-ಶೃಂಗೇರಿ ರಸ್ತೆ ಅಗಲೀಕರಣ ಯೋಜನೆ ಸಾಧ್ಯವಾಗದೇ ಹೊಸ್ಮಾರು-ಬಜಗೋಳಿ-ಮಾಳಯಾಗಿ ಶೃಂಗೇರಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿತ್ತು. ಈ ಮಾರ್ಗವಾಗಿ ಪ್ರಯಾಣ ಮುಂದುವರಿಸಿದರೆ 15 ಕಿ.ಮೀ ಬಲು ದೂರವಾಗಿದೆ.
ರಸ್ತೆ ಅಯೋಮಯ ಬಸ್ ಸಂಚಾರ ಮೊಟಕು
ಕಾರ್ಕಳ-ರೆಂಜಾಳ-ನೆಲ್ಲಿಕಾರು-ಹೊಸ್ಮಾರು-ನೂರಾಲ್ಬೆಟ್ಟು-ಮೂಡಬಿದ್ರಿ ಹಾಗೂ ಕಾರ್ಕಳ-ಬಜಗೋಳಿ-ಮಾಳ-ಹುಕ್ರಟ್ಟೆ-ನೂರಾಲ್ಬೆಟ್ಟು-ಈದು ಮಾರ್ಗವಾಗಿ ಗ್ರಾಮೀಣ ಜನತೆಯ ಪ್ರಯಾಣಕ್ಕೆ ಅನುಕೂಲವಾಗಿ 2 ಖಾಸಗಿ ಬಸ್ ಗಳು ಓಡಾಟ ನಡೆಸುತ್ತಿದ್ದವು. ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಓಡಾಟುತ್ತಿದ್ದ ಬಸ್ ಗಳು ದುರಸ್ಥಿಗಾಗಿ ಗ್ಯಾರೇಜ್ ಗೆ ಸೇರುತ್ತಿದ್ದುದರಿಂದ ನಷ್ಟ ಅನುಭವಿಸಿ ಮಾಲಕರು ಬಸ್ ಗಳೆರಡನ್ನು ಸ್ಥಗಿತಗೊಳಿಸಿದ್ದಾರೆ.
ನೂರಾಲ್ಬೆಟ್ಟು ಸುಮಾರು ಮೂರುವರೆ ಕ್ರಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸುವ ಸುಮಾರು 250 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಾರ್ಕಳ,ನಾರಾವಿ, ಮೂಡಬಿದ್ರಿ ವಿದ್ಯಾಸಂಸ್ಥೆಗಳಿಗೆ ಶಾಲಾ ದಿನಗಳಲ್ಲಿ ಸಂಚಾರ ನಡೆಸಿದರೆ ಸಂಜೆ ಅಷ್ಟೇ ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸಿ ಮನೆ ತಲುಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಚುನಾವಣೆ ಬಹಿಷ್ಕರಿಸಲು ಪಣತೊಟ್ಟ ನಾಗರಿಕರು
ನೂಲಾಲ್ಬೆಟ್ಟು ರಸ್ತೆಯ ಅದೋಗತಿಯನ್ನು ಮುಂದಿಟ್ಟು ವಿವಿಧ ಸ್ತರದ ಜನಪ್ರತಿನಿಧಿಗಳಿಗೆ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಇದು ವರೆಗೆ ಯಾವುದೇ ತರದಲ್ಲಿ ಸ್ವಂದನೆ ಸಿಗದೇ ಹೋದುದರಿಂದ ಸ್ಥಳೀಯ ನಾಗರಿಕರು ಮೂಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳನ್ನು ಬಹಿಷ್ಕರಿಸುವ ನಿಧರ್ಾರಕ್ಕೆ ಮುಂದಾಗಿದ್ದಾರೆ. ಇದರ ಭಾಗವಾಗಿ ಸೋಮವಾರ ಸಂಜೆ ವೇಳೆಗೆ ನಾಗರಿಕರು ಬೀದಿಗಳಿದು ಘೋಷಣೆ ಕೂಗಿ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದ್ದಾರೆ.
ರಾಜಕೀಯ ಅಸ್ತ್ರವಾಯಿತೇ ಬಹಿಷ್ಕಾರ?
ಮೂಲಭೂತ ಸೌಕರ್ಯದಿಂದ ವಂಚಿತರಾದ ಗ್ರಾಮಸ್ಥರು ಚುನಾವಣೆಯ ಸಂದರ್ಭದಲ್ಲಿ ಇದೇ ವಿಚಾರವನ್ನು ಮುಂದಿಟ್ಟು ಚುನಾವಣಾ ಬಹಿಷ್ಕಾರ ಹಾಕುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಕಳೆದ ಲೋಕಸಭಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇಂತಹ ಪ್ರಹಸನ ಸಾಣೂರಿನಲ್ಲಿ ನಡೆದಿತ್ತು. ಸಾಣೂರು-ಕುಂಟಲ್ಪಾಡಿ ರಸ್ತೆ ಅಭಿವೃದ್ಧಿಯಾಗದ ಹಿನ್ನಲ್ಲೆಯಲ್ಲಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಬ್ಯಾನರ್ ಹಾಕಿದ ವೇಳೆಗೆ ಚುನಾವಣಾ ಅಭ್ಯರ್ಥಿಯೊಬ್ಬರು ಚುನಾವಣಾ ನೀತಿಯನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಅಲ್ಲಿಗೆ ತೆರಳಿ ಭರವಸೆಯನ್ನು ನೀಡಿ ಹೇಳಿಕೆಯನ್ನು ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ್ದರು.
ಚುನಾವಣಾ ಬಹಿಷ್ಕಾರದ ನೆಪದಲ್ಲಿ ನಿಷ್ಕ್ರಿಯೆಗೊಂಡಿರುವ ಗ್ರಾಮಸ್ಥರನ್ನು ಒಂದೆಡೆಯಲ್ಲಿ ಸೇರಿಸಿಕೊಂಡು ಅವರನ್ನು ಯಾವುದಾದರೂ ಪಕ್ಷದ ಮುಖಂಡರು ಭೇಟಿಯಾಗಿ ಅಸ್ವಾಸನೆಯ ಭರವಸೆ ನೀಡಿ ಅವರೆಲ್ಲರ ಓಟು ತಮ್ಮದಾಗಿರಿಸುವ ಪ್ರಯತ್ನವು ಇದರಲ್ಲಿ ಅಡಕವಾದರೂ ಆಶ್ಚರ್ಯ ವಿಲ್ಲ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ಸಾಣೂರು-ಕುಂಟಲ್ಪಾಡಿಯ ನಾಲ್ಕು ಕಿ.ಮೀ ರಸ್ತೆ ಅಭಿವೃದ್ಧಿ ನಂತರ ದಿನಗಳಲ್ಲಿ ಅಭಿವೃದ್ಧಿ ಕಂಡಿತ್ತಾದರೂ ಅಭಿವೃದ್ಧಿ ತನ್ನದೆಂದು ಇಬ್ಬರು ಜನಪ್ರತಿನಿಧಿಗಳು ಬ್ಯಾನರ್ ಗಳನ್ನು ಹಾಕಿಸಿ ರಾಜಕೀಯ ದಾಳವನ್ನಾಗಿ ಬಳಸಿಕೊಮಡಿರುವುದು ಕಾರ್ಕಳಕ್ಕೆ ಹೊಸತೆನ್ನು ಅಲ್ಲ.