ಕಾಸರಗೋಡು: ಬಸ್ಸು ಪ್ರಯಾಣಿಕೆಯ ಚಿನ್ನದ ಸರ ಎಗರಿಸಲು ಯತ್ನಿಸುತ್ತಿದ್ದಾಗ ಅಲೆಮಾರಿ ಯುವತಿ ಸಿಕ್ಕಿಬಿದ್ದ ಘಟನೆ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತಳನ್ನು ತಮಿಳುನಾಡಿನ ಮಂಜೇಶ್ವರಿ ( 34) ಎಂದು ಗುರುತಿಸಲಾಗಿದೆ. ಖಾಸಗಿ ಬಸ್ಸಿನಲ್ಲಿ ಈಕೆ ಮಹಿಳೆಯ ಕುತ್ತಿಗೆಯಿಂದ ಸರ ಎಗರಿಸಲು ಯತ್ನಿಸಿದ್ದು, ಮಹಿಳೆ ಬೊಬ್ಬೆ ಹಾಕಿದಾಗ ಈಕೆ ಮತ್ತು ಜೊತೆಗಿದ್ದ ಇನ್ನೋರ್ವ ಯುವತಿ ಪರಾರಿಯಾಗಲೆತ್ನಿಸಿದ್ದು, ಕೂಡಲೇ ವಿದ್ಯಾನಗರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮಂಜೇಶ್ವರಿಯನ್ನು ಹಿಡಿದು ಪೋಲಿಸರಿಗೊಪ್ಪಿಸಿದರೂ ಜೊತೆಗಿದ್ದವಳು ಪರಾರಿಯಾದಳು.
ಮಂಜೇಶ್ವರಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಕಳವು ಪ್ರಕರಣದಲ್ಲಿ ಶಾಮೀಲಾಗಿದ್ದಳು ಎಂದು ತಿಳಿದು ಬಂತು. 2012ರಲ್ಲಿ ಚಟ್ಟ೦ಚಾಲ್ ನಿಂದ ವೃದ್ದೆಯೋರ್ವರ ಚಿನ್ನದ ಸರ ಎಗರಿಸಿದ ಪ್ರಕರಣದಲ್ಲೂ ಆರೋಪಿಯಾಗಿದ್ದಾಳೆ.