ಬಂಟ್ವಾಳ: ನದಿ ನೀರಿಗೆ ವಿಷಬೆರೆತ ಪರಿಣಾಮ ವಿಟ್ಲ ಸಿಪಿಸಿಆರ್ ಐ ವಠಾರದಲ್ಲಿರುವ ಕಂಬಳಬೆಟ್ಟು -ಒಕ್ಕೆತ್ತೂರು ನದಿಯದಾಸರಬೆಟ್ಟು ಎಂಬಲ್ಲಿ ಮೀನುಗಳು ಹಾಗೂ ಇತರ ಜಲಚರಗಳ ಮಾರಣ ಹೋಮ ನಡೆದ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ.
ರಾಮನಗರ ಸಿಪಿಸಿಆರ್ ಐ ದ್ವಾರದ ಮೂಲಕ ಪಲೇರಿಪ್ರದೇಶಕ್ಕೆ ತೆರಳುವ ರಸ್ತೆಯಲ್ಲಿ ಸಿಗುವ ಅಣೆಕಟ್ಟು ಭಾಗದಲ್ಲಿ ಶೇಖರವಾಗಿದ್ದ ನೀರಿನಲ್ಲಿದ್ದ ಜಲಚರಗಳಿಗೆ ವಿಷ ಉಣಿಸಲಾಗಿದೆ. ಸುಮಾರುಎರಡು ದಿನಗಳ ಹಿಂದೆ ಈ ಕೃತ್ಯ ನಡೆಸಿರುವ ಅನುಮಾನವಿದ್ದು, ಸ್ಥಳೀಯ ನಿವಾಸಿಗಳ ಜತೆ ಸೇರಿದ ಕೆಲವು ಸರ್ಕಾರಿ ಅಧಿಕಾರಿಗಳು ಈ ಕೃತ್ಯ ನಡೆಸಿರುವ ಅನುಮಾನಗಳೀವೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ನೀರಿನ ಸ್ಯಾಂಪಲ್ ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಯಾವ ವಿಷ ವಸ್ತುಗಳನ್ನು ಬಳಸಲಾಗಿದೆ ಎಂಬ ಖಚಿತ ಮಾಹಿತಿ ಬಳಿಕ ಸಿಗಲಿದೆ. ನದಿ ನೀರಿಗೆವೆಲ್ಡಿಂಗ್ಗೆ ಬಳಸುವ ಕ್ಯಾಲ್ಸಿಯಂ ಕಾರ್ಬೈಡ್ ಮತ್ತು ಎಂಡೋ ಸಲ್ಫಾನ್ ಬಳಸಿರುವ ಶಂಕೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ.
ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಇಂಜಿನಿಯರ್ ತುಳಸೀದಾಸ್, ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ, ಸಿಬ್ಬಂದಿಗಳಾದ ಲೋಕೇಶ್, ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಟ್ಲ ಪಟ್ಟಣ ಪಂಚಾಯಿತಿಯಿಂದ ನೀಡಿದದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.