ಕಾಸರಗೋಡು: ಒಂದು ಕಿಲೋ ಗಾಂಜಾ ಸಹಿತ ಓರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕುಂಬಳೆ ಕಿದೂರು ದಂಡೆಗೋಳಿಯ ಅಬ್ದುಲ್ ಲತೀಫ್ (39) ಎಂದು ಗುರುತಿಸಲಾಗಿದೆ. ಪುತ್ತಿಗೆ ಕಟ್ಟತ್ತಡ್ಕದಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದ ಈತನನ್ನು ವಿಚಾರಣೆ ನಡೆಸಿದಾಗ ಗಾಂಜಾ ವಹಿವಾಟು ನಡೆಸುತ್ತಿರುವುದಾಗಿ ತಪ್ಪೊಪ್ಪಿಕೊಂಡನು.
ಎರಡು ದಿನಗಳ ಹಿಂದೆ ಅರ್ಧ ಕಿಲೋ ಗಾಂಜಾ ಸಹಿತ ಸುಳ್ಯ ನಿವಾಸಿ ಯೋರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದರು. ಕುಂಬಳೆ ಕೇಂದ್ರೀಕರಿಸಿ ಗಾಂಜಾ ವಹಿವಾಟು ನಡೆಸುತ್ತಿರುವ ಜಾಲವೇ ಕಾರ್ಯಾಚರಿಸುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ನಿಗಾ ಇರಿಸಿದ್ದಾರೆ.