ಪುತ್ತೂರು: ನಿಡ್ಪಳ್ಳಿ ಗ್ರಾಮದ ನುಳಿಯಾಲು ಎಂಬಲ್ಲಿ ಅಬಕಾರಿ ಪೊಲೀಸರು ದಾಳಿ ನಡೆಸಿ ಮನೆಯಲ್ಲಿ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸಿ ವ್ಯಕ್ತಿಯನ್ನು ಬಂಧಿಸಿ, ಮದ್ಯವನ್ನು ವಶಕ್ಕೆ ತೆಗೆದು ಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ನಿಡ್ಪಳ್ಳಿ ಗ್ರಾಮದ ನುಳಿಯಾಲು ನಿವಾಸಿ ಚಂದ್ರಶೇಖರ್ ಎಂಬವರು ಬಂಧಿತ ಆರೋಪಿ. ಚಂದ್ರಶೇಖರ್ ರವರು ತನ್ನ ಮನೆಯಲಿ 8.640 ಲೀಟರ್ ಮದ್ಯವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು. ತಾ.ಪಂ ಮತ್ತು ಜಿ.ಪಂ ಚುನಾವಣೆ ಹಿನ್ನಲೆಯಲ್ಲಿ ಪುತ್ತೂರು ಉಪವಿಭಾಗದ ಕಚೇರಿಯ ಅಬಕಾರಿ ಉಪ ಅಧೀಕ್ಷಕ ಚಂದ್ರಪ್ಪರವರ ಆದೇಶದ ಮೇರೆಗೆ ಪುತ್ತೂರು ವಲಯ ಅಬಕಾರಿ ನಿರೀಕ್ಷಕ ಶಿವಪ್ರಸಾದ್ರವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ನವೀನ್ ಕುಮಾರ್ ಮತ್ತು ಸಿಬಂದಿಗಳಾದ ಉಮೇಶ್, ಪ್ರವೀಣ್, ಪದ್ಮನಾಭ ಮತ್ತು ವಾಹನ ಚಾಲಕ ಬಾಲಕೃಷ್ಣರವರು ಕಾರ್ಯಾಚರಣೆ ನಡೆಸಿದ್ದರು. ಆರೋಪಿಯನ್ನು ಬಂಧಿಸಿದ ಅಬಕಾರಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.