ಮಂಗಳೂರು: ಸೋಮೆಶ್ವರ-ಉಚ್ಚಿಲ ಬೀಚ್ ಗೆ ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ಯುವಕರು ನೀರು ಪಾಲದ ದುರ್ಘಟನೆ ಭಾನುವಾರ ಸಂಭವಿಸಿದೆ.
ಮೃತರು ಹಾಸನದ ವಲ್ಲಭಾಬಾಯ್ ನಗರ ನಿವಾಸಿ ಗಳಾದ ಮಹಮ್ಮದ್ ಹನೀಫ್(24), ಮಹಮ್ಮದ್ ಸುಹೇದ್(23)ಇಮ್ರಾನ್ ಪಾಷಾ(24) ಶಹೀದ್ ಕಲೀಮ್(25) ಎಂದು ತಿಳಿದು ಬಂದಿದೆ. ದರ್ಗಾಕ್ಕೆ ತೆರಳಲು ಆಗಮಿಸಿದ್ದ ಸ್ನೇಹಿತರು ಈಜಲೆಂದು ಸಮುದ್ರಕ್ಕಿಳಿದಿದ್ದರು. ಒಟ್ಟು ಆರು ಮಂದಿ ಯುವಕರು ಪ್ರವಾಸಕ್ಕಾಗಿ ಬಂದಿದ್ದು , ಸಮುದ್ರಕ್ಕಿಳಿದ ವೇಳೆ ನಾಲ್ವರು ನೀರು ಪಾಲಾಗಿದ್ದಾರೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.