ಕಾರ್ಕಳ: ನಿಟ್ಟೆ ಕಿಲ್ಲಬೆಟ್ಟು ಎಂಬಲ್ಲಿನ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಜಾಗದಲ್ಲಿ ಗಂಡು ಚಿರತೆಯೊಂದು ಸಾವಿಗೀಡಾಗಿದೆ.
ಬಾಲಕೃಷ್ಣ ಹೆಗ್ಡೆ ಎಂಬವರಿಗೆ ಸೇರಿದ ಜಾಗದಲ್ಲಿ ಶನಿವಾರ ತಡರಾತ್ರಿಯಿಂದ ರವಿವಾರ ನಸುಕಿನ ಜಾವದೊಳಗಾಗಿ ಗಂಡು ಚಿರತೆ ಸಾವಿಗೀಡಾಗಿರಬೇಕೆಂದು ಶಂಕಿಸಲಾಗಿದೆ. ಸುಮಾರು 8 ವರ್ಷ ವಯಸ್ಸಿನ ಗಂಡು ಚಿರತೆ ಅದಾಗಿದ್ದು, ಘಟನಾ ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು, ಪಶುವೈದ್ಯಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರೀಕ್ಷೆಗಾಗಿ ಚಿರತೆಯನ್ನು ಕೊಂಡುಹೋಗಲಾಗಿದೆ. ನಿಟ್ಟೆ ಪರಿಸರದಲ್ಲಿ ವ್ಯಾಪಕವಾಗಿ ಚಿರತೆ ಹಾವಳಿ ಕಂಡುಬಂದಿದ್ದು ಸಾಕು ಪ್ರಾಣಿಗಳು ಬಲಿಯಾಗುತ್ತಿರುವ ಘಟನಾವಳಿ ಹೆಚ್ಚಾಗಿದೆ.