ಮೂಡುಬಿದಿರೆ: ಬೆಳುವಾಯಿ ಸಮೀಪದ ಗುಜ್ಜರಗುಂಡಿಯ ಕ್ವಾರೆ ಸಮೀಪ, ಬಾಗಲಕೋಟೆ ಮೂಲದ ಕಾರ್ಮಿಕ ಕೊಲೆಯಾಗಿದ್ದು, ಸೋಮವಾರ ಬೆಳಕಿಗೆ ಬಂದಿದೆ.
ಬಾಗಲಕೋಟೆ ಮೂಲದ ಕಾರ್ಮಿಕ ಶಿವ(30) ಕೊಲೆಯಾದ ಕಾರ್ಮಿಕ. ಗುಜ್ಜರಗುಂಡಿಯಲ್ಲಿ ಕ್ವಾರೆಯೊಮದರಲ್ಲಿ ಕೆಲಸ ಮಾಡುತ್ತಿದ್ದ ಶಿವ ಹಾಗೂ ಇತರ ಕಾರ್ಮಿಕರು ವಾಸವಾಗಿದ್ದ ಶೆಡ್ ನಲ್ಲಿ ಪತ್ತೆಯಾಗಿದೆ. ಮೃತದೇಹದ ಅಲ್ಲಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಮೂಡುಬಿದರೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಆತನೊಂದಿಗೆ ವಾಸವಾಗಿದ್ದ ಇಬ್ಬರನ್ನು ವಿಚಾರಣೆಗೊಳಪಡಿಸಿದ್ದಾರೆ. ಕೊಲೆಗೆ ಕಾರಣ ಹಾಗೂ ಆರೋಪಿಗಳ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.