ಮೂಡುಬಿದರೆ: ಬೆಳುವಾಯಿಯಲ್ಲಿ ಭಾನುವಾರ ನಡೆದ ಕೂಲಿ ಕಾರ್ಮಿಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೆಳುವಾಯಿಯ ಕಲ್ಲುಕೋರೆಯೊಂದರಲ್ಲಿ ಲೋಡರ್ ಆಗಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಮೂಲದ ಕಾರ್ಮಿಕ ಶಿವ ಎಂಬವನನ್ನು ಆತನ ಜೊತೆಗಿದ್ದ, ಬಾಗಲಕೋಟೆ ಮೂಲದ ರಾಜ್ ಕುಮಾರ್, ರಂಗಪ್ಪ ಯಾನೆ ಉಮೇಶ ಹಾಗೂ ಕುಮಾರ್ ಕುಡಿತ ಮತ್ತಿನಲ್ಲಿ ಕೊಲೆ ಮಾಡಿರುವುದು ವಿಚಾರಣೆ ಸಂದರ್ಭದಲ್ಲಿ ತಿಳಿದುಬಂದಿದೆ. ಆರೋಪಿಗಳನ್ನು ಮಂಗಳವಾರ ಮೂಡುಬಿದರೆ ನ್ಯಾಯಾಲಯಕ್ಕೆ ಹಾಜರಿಪಡಿಸಲಾಗಿದ್ದು, 15ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.