ಕಾಸರಗೋಡು: ಗಾಂಜಾ ಸಹಿತ ಓರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕುಂಬಳೆ ಕೊಡಿಯಮ್ಮೆಯ ಅಬ್ದುಲ್ಲ (48) ಎಂದು ಗುರುತಿಸಲಾಗಿದೆ.
ಈತನಿಂದ 200 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಕೊಡಿಯಮ್ಮೆ ಬಸ್ಸು ನಿಲ್ದಾಣ ಸಮೀಪ ಸಂಶಯಾಸ್ಪದವಾಗಿ ಕಂಡುಬಂದ ಈತನನ್ನು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.