ಕಾಸರಗೋಡು: ಮದ್ರಸ ಅಧ್ಯಾಪಕನೋರ್ವ ವಿದ್ಯಾರ್ಥಿ ಮೇಲೆ ದೌರ್ಜನ್ಯ ನಡೆಸಿದ ಘಟನೆ ಕುಂಬ್ಳೆಯಲ್ಲಿ ನಡೆದಿದೆ.
ಉಪ್ಪಳ ಪಾರೆಕಟ್ಟೆ ಯಾ ರಿಯಾಜ್ ರೆಹಾನ್ (8) ದೌರ್ಜನ್ಯಗೊಳಗಾದ ವಿದ್ಯಾರ್ಥಿ. ನಯಬಜಾರಿನ ಆಂಗ್ಲ ಮಾಧ್ಯಮ ಶಾಲೆ ಸಮೀಪ ಕಾರ್ಯಾಚರಿಸುತ್ತಿರುವ ಮದ್ರಸದ ಅಧ್ಯಾಪಕ ಹಲ್ಲೆ ನಡೆಸಿದ್ದಾಗಿ ವಿದ್ಯಾರ್ಥಿ ದೂರಿದ್ದು , ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಅಧ್ಯಾಪಕನ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ.