ಕಾರ್ಕಳ: ಮಂಗಳೂರಿನವನು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ. ಭಾರತೀಯ ಕ್ರಿಕೆಟ್ ತಂಡ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಧಾರ್ಮಿಕ ನಂಬಿಕೆಯ ಹಿನ್ನಲ್ಲೆಯಲ್ಲಿ ಊರ ಸಂಬಂಧ ವೃದ್ಧಿಸಿದೆ. ಕಳೆದ ಏಳು ವರ್ಷಗಳಿಂದ ಇಲ್ಲಿಗೆ ಅಗಮಿಸಿ ದೇವರ ಸೇವೆಗೈಯುತ್ತಿದ್ದೇನೆ ಎಂದು ಭಾರತೀಯ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಾಜಿ ಆಟಗಾರ ರವಿಶಾಸ್ತ್ರಿ.
ಕಾರ್ಕಳ ಎರ್ಲಪ್ಪಾಡಿ ಗೋವಿಂದೂರು ಕರ್ವಾಲು ಶ್ರೀ ಮಹಾವಿಷ್ಣು ಶೀಕ್ಷೇತ್ರಕ್ಕೆ ಬುಧವಾರದಂದು ಅಗಮಿಸಿ ಪೂಜಾ-ಹರಕೆ ಸಂದಾಯ ಸಲ್ಲಿಸಿದ ಬಳಿಕ ಮಾಧ್ಯಮ ಮಿತ್ರರನ್ನು ಅವರು ಉದ್ದೇಶಿಸಿ ಮಾತನಾಡಿದರು.
ರವಿಶಾಸ್ತ್ರಿಯವರ ಕುಟುಂಬಸ್ಥದವರು ಆರಾಧಿಸಿಕೊಂಡು ಬಂದಿದ್ದ ಮೂಲ ನಾಗಬನವು ಈ ಶ್ರೀಕ್ಷೇತ್ರದ ಪರಿಸರದಲ್ಲಿ ಇದೆ. ವೃತ್ತಿಜೀವನಕ್ಕೆ ಕಾಲಿಟ್ಟ ಅವರು ಮುಂಬಯಿಯಲ್ಲಿ ನೆಲೆ ಕಂಡಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬರೋಬರಿ 18 ವರ್ಷ ಕಳೆದರೂ ರವಿಶಾಸ್ತ್ರಿ ಅವರಿಗೆ ಮಕ್ಕಳ ಸಂತಾನ ಪ್ರಾಪ್ತಿಯಾಗದೇ ಇದ್ದಾಗ ಅವರು ಜೋತಿಷ್ಯಶಾಸ್ತ್ರಕ್ಕೆ ಮೊರೆ ಹೋಗಿದ್ದರಂತೆ. ಕುಂಟುಂಬದ ಮೂಲ ನಾಗನ ಆರಾಧನೆ ಮರೆತು ಹೋಗಿರುವುದರಿಂದ ಹೀಗಾಗಿದೆ ಎಂದು ಅಂದು ಜೋತಿಷ್ಯರು ನುಡಿದ ಭವಿಷ್ಯದಂತೆ ಎಂಟು ವರ್ಷಗಳ ಹಿಂದೆ ಮೊದಲ ಬಾರಿಗೆ ರವಿಶಾಸ್ತ್ರಿ ಕಾರ್ಕಳದ ಕರ್ವಾಲು ಶ್ರೀ ವಿಷ್ಣುಮೂರ್ತಿ ಶ್ರೀ ಕ್ಷೇತ್ರಕ್ಕೆ ಅಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ಪರಿಸರದಲ್ಲಿ ಇರುವಂತ ಐತಿಹಾಸಿಕ ನಾಗಬನದಲ್ಲಿ ಪೂಜಾ ಕೈಂಕರ್ಯ ನಡೆಸಿ ಹರಕೆ ಹೊತ್ತು ಹೋಗಿದಂತೆ. ಅದರ ಫಲವಾಗಿ ಆರು ತಿಂಗಳೊಳಗಾಗಿ ಪತ್ನಿ ಗರ್ಭವತಿಯಾಗಿ ಮುದಾದ ಹೆಣ್ಣು ಮಗುವೊಂದರ ಜನ್ಮಕ್ಕೆ ಕಾರಣವಾಗಿದೆ. ಈ ಘಟನೆಯ ಬಳಿಕ ಪ್ರತಿ ವರ್ಷ ರವಿಶಾಸ್ತ್ರಿ ಅವರು ಇದೇ ಕ್ಷೇತ್ರಕ್ಕೆ ಅಗಮಿಸಿ ಹರಕೆ ಸಂದಾಯ ಸಲ್ಲಿಸುವ ವಾಡಿಕೆಯನ್ನು ಮುಂದುವರಿಸಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉದ್ದಗಲದಲ್ಲಿ ಇರುವಂತಹ ಪ್ರಮುಖ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿರುವ ರವಿಶಾಸ್ತ್ರಿ ಬುಧವಾರ ಬೆಳಿಗ್ಗೆ 9.30ರ ವೇಳೆಗೆ ಶ್ರೀ ಕ್ಷೇತ್ರಕ್ಕೆ ಅಗಮಿಸಿದರು. ಕ್ಷೇತ್ರದ ಪ್ರಮುಖ ದೇವರಾದ ಶ್ರೀ ವಿಷ್ಣು ಮೂರ್ತಿ ದೇವರಿಗೆ ಪೂಜೆ ನೆರವೇರಿಸಿದ ಬಳಿಕ ನಾಗ ಬನಕ್ಕೆ ಅಗಮಿಸಿದ ಅವರು ಪ್ರದರ್ಶಣೆ ನಡೆಸಿ ದರ್ಶನ ಪಡೆದರು. ನಾಗನ ಬನದಲ್ಲಿ ಜರುಗಿದ್ದ ಆಶ್ಲೇಷಾ, ಪಂಚಾಮೃತ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡ ಅವರು ತಮ್ಮ ಹರಕೆ ಸಲ್ಲಿಸಿ ನಾಗದರ್ಶನದಲ್ಲಿ ಪಾತ್ರಿಯವರಿಂದ ಪ್ರಸಾದ ಸ್ವೀಕರಿಸಿದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಮುಂಜರಾಯಿ ಇಲಾಖೆಯ ಸದಸ್ಯ ಕೇಂಜ ಶ್ರೀಧರ್ ತಂತ್ರಿ ದಂಪತಿಗಳು ಅವರು ಕೂಡಾ ಅದೇ ಸಂದರ್ಭದಲ್ಲಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ದರ್ಶನ ಪಡೆದು ಹರಕೆ ಸಂದಾಯ ಮಾಡಿದರು. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಸೋಮಶೇಖರ್ ರಾವ್, ಕರ್ವಾಲು ಮೂಲದ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಯುವರಾಜ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಅಶೋಕ್ ಕಾರಂತ ಪೂಜಾ ವಿಧಿವಿಧಾನ ನೆರವೇರಿಸಿದರು. ರಮಾನಂದ ಪಾತ್ರಿ ನಾಗ ದರ್ಶನ ನೆರವೇರಿಸಿದರು.