ಮೂಡುಬಿದಿರೆ: ಚುನಾವಣಾ ಪ್ರಚಾರ ವೇಳೆ ಬಿಜೆಪಿ ನೆಮ್ಮದಿ ಹಾಗೂ ಅಭಿವೃದ್ಧಿ ವಿಷಯವನ್ನಿಟ್ಟುಕೊಂಡು ಮತ ಯಾಚಿಸಿದ್ದೇವೆ. ಆದರೆ ಸಚಿವ ಅಭಯಚಂದ್ರ ಜೈನ್ ಪ್ರಶಾಂತ್ ಕೊಲೆ ಪ್ರಕರಣವನ್ನು ಮತ್ತೆ ಕೆದಕುತ್ತಿದ್ದಾರೆ. ಮರಣದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಬಿಜೆಪಿಗಿಲ್ಲ. ಪ್ರಶಾಂತ್ ಗೆ ಆದ ಗತಿಯೇ ನಿನಗೆ ಆಗುತ್ತದೆ ಎನ್ನುವ ಮೂಲಕ ಸಚಿವರು, ಪುತ್ತಿಗೆ ಜಿ.ಪಂ ಬಿಜೆಪಿ ಅಭ್ಯರ್ಥಿಗೆ ಧಮ್ಕಿ ಹಾಕುವುದರೊಂದಿಗೆ, ಪ್ರಶಾಂತ್ ಕೊಲೆ ಪ್ರಕರಣವನ್ನು ರಾಜಕೀಯವಾಗಿ ಬಳಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಬಿಜೆಪಿ ಪ್ರಚಾರ ಸಮಿತಿ ಪ್ರಮುಖ ಕೆ.ಪಿ ಜಗದೀಶ್ ಅಧಿಕಾರಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು, ಬಿಜೆಪಿ ಗೆಲುವಿಗೆ ಕಾರಣಗಳೇನು ಎನ್ನುವುದರ ಕುರಿತು ಮಾಹಿತಿ ನೀಡಿದರು. ಕಾಂಗ್ರೆಸ್ ದುರಾಳಿತ, ದ್ವೇಷದ ರಾಜಕಾರಣದಿಂದ ಮತದಾರ ರೋಸಿಹೋಗಿದ್ದಾನೆ. ಬಿಜೆಪಿಯ ವಿಚಾರಧಾರೆ, ಕಾರ್ಯಕರ್ತರ ಶ್ರಮ ಬಿಜೆಪಿಯ ಸಾಮಥ್ರ್ಯವಾಗಿದೆ ಎಂದರು.