News Kannada
Wednesday, July 06 2022

ಕರಾವಳಿ

ಬಂಟ್ವಾಳ: ಜಿಪಂ-ತಾಪಂ ಚುನಾವಣೆಗೆ ಕ್ಷಣಗಣನೆ ಆರಂಭ - 1 min read

Photo Credit :

ಬಂಟ್ವಾಳ: ಜಿಪಂ-ತಾಪಂ ಚುನಾವಣೆಗೆ ಕ್ಷಣಗಣನೆ ಆರಂಭ

ಬಂಟ್ವಾಳ: ಶನಿವಾರ ನಡೆಯಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ತಾಲೂಕು ಆಡಳಿತ ಶಾಂತಿಯುತ ಮತದಾನಕ್ಕೆ ಸಂಪೂರ್ಣ ಸಜ್ಜಾಗಿದೆ.


ಮತಗಟ್ಟೆಗಳಿಗೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ಮೊಡಂಕಾಪು ಇನ್ಫೆಂಟ್ ಜೀಸಸ್ ವಿದ್ಯಾಸಂಸ್ಥೆಯಲ್ಲಿರುವ ಮಸ್ಟರಿಂಗ್ ಕೇಂದ್ರದಿಂದ ಶುಕ್ರವಾರ ಅಪರಾಹ್ನವೇ ಮತಗಟ್ಟೆಗಳಿಗೆ ಮತಯಂತ್ರಗಳೊಂದಿಗೆ ಪಯಣ ಬೆಳೆಸಿದರು.

ಜಿಲ್ಲಾಪಂಚಾಯತ್ ನ 9 ಸ್ಥಾನಗಳಿಗೆ ಹಾಗೂ ತಾಲೂಕು ಪಂಚಾಯತ್ ನ 34 ಸ್ಥಾನಗಳಿಗೆ ಚುನಾವಣೆ ನಡೆಸಲು 288 ಮತಗಟ್ಟೆಗಳನ್ನು ನಿಗದಿಪಡಿಸಲಾಗಿದ್ದು,ಇದರಲ್ಲಿ 113  ಸೂಕ್ಷ್ಮ, 31 ಅತಿಸೂಕ್ಷ್ಮ ಹಾಗೂ 144 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಒಟ್ಟು 2,67,381 ಮತದಾರರಿದ್ದು, ಇದರಲ್ಲಿ  1,33,857 ಪುರುಷ ಮತದಾರರು ಹಾಗೂ 1,33,524 ಮಹಿಳಾ ಮತದಾರರಿದ್ದಾರೆ.

ಚುನಾವಣಾಧಿಕಾರಿ ಮಂಗಳೂರು ಸಹಾಯಕ ಕಮೀಷನರ್, ನೋಡಲು ಅಧಿಕಾರಿ ಉಮೇಶ್ ಎನ್.ಆರ್, ತಹಶೀಲ್ದಾಋ ಪುರಂದರ ಹೆಗ್ಡೆ, ಉಪತಹಶೀಲ್ದಾರ್ ಪರಮೇಶ್ವರ ನಾಯ್ಕ್ ಮತ್ತು ಚುನಾವಣೆಗೆ ನಿಯೋಜಿಸಿದ ಅಧಿಕಾರಿಗಳು ಹಾಜರಿದ್ದು, ಸಿದ್ದತೆಯಲ್ಲಿ ಸಹಕರಿಸಿದರು. ತಾಲೂಕು ವ್ಯಾಪ್ತಿಯ ಪೊಲೀಸ್ ಠಾಣೆಗಳು ಪೊಲೀಸ್ ಸಿಬ್ಬಂದಿಗಳನ್ನು ಚುನಾವಣಾ  ಬಂದೋಬಸ್ತ್ ಗೆ ನೇಮಿಸಲಾಗಿದೆ ಮಾಥ್ರವಲ್ಲದೆ, ಬಾಗಲಕೋಟೆಯ ಓರ್ವ ಡಿಎಸ್ಪಿ, ಇಬ್ಬರು ಸಿಪಿಐ, 2 ಪಿಎಸ್ಐ, 210 ಪೊಲೀಸ್ ಕಾನ್ಸ್ ಟೇಬಲ್ ಹಾಗೂ 130 ಹೋಂ ಗಾರ್ಡ್ ಗಳನ್ನು  ನಿಯೋಜಿಸಲಾಗಿದೆ.

See also  ಇಸ್ಮಾಯಿಲ್ ನೇಲ್ಯಮಜಲು ಕೊಲೆ ಪ್ರಕರಣ: ನಾಲ್ವರು ಪೊಲೀಸ್ ಕಸ್ಟಡಿಗೆ, ಮೂವರಿಗೆ ನ್ಯಾಯಾಂಗ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು