ಮೂಡುಬಿದರೆ: ಮಂಗಳೂರಿನಲ್ಲಿ ಜರಗಿದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ನಲ್ಲಿ 52 ಕೆ.ಜಿ.ವಿಭಾಗದಲ್ಲಿ ಅಕ್ಷತಾ ಪೂಜಾರಿ ಬೋಳ ಚಿನ್ನದ ಪದಕ ಗಳಿಸಿದ್ದಾರೆ.
ಸಚ್ಚರಿಪೇಟೆಯ ಬೋಳದ ಭೋಜ ಪೂಜಾರಿ, ಪ್ರೇಮಾ ಪೂಜಾರಿ ದಂಪತಿಯ ಪುತ್ರಿ ಅಕ್ಷತಾ ಅವರು ಕಿನ್ನಿಗೋಳಿಯ ವೀರ ಮಾರುತಿ ವ್ಯಾಯಾಮ ಶಾಲೆಯ ಸದಸ್ಯೆ. ಈಶ್ವರ ಕಟೀಲ್ ಮತ್ತು ಕೇಶವ ಕರ್ಕೇರಾ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಇದರೊಂದಿಗೆ ಅವರು ಹಿಮಾಚಲ ಪ್ರದೇಶದಲ್ಲಿ ಮಾರ್ಚ್ 27ರಂದು ನಡೆಯಲಿರುವ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.