ಕಾರ್ಕಳ: ಗ್ಲೋಬಲ್ ಎಚೀವರ್ಸ್ ಫೌಂಡೇಶನ್, ಮೈಸೂರು ಇವರು ಪ್ರಸಕ್ತ ವರ್ಷದ ರಾಷ್ಟ್ರೀಯ ಏಕತೆ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಶ್ರಮಿಸಿದವರಿಗೆ ಕೊಡ ಮಾಡುವ ಪ್ರಶಸ್ತಿಯನ್ನು ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾಧಿಕಾರಿ ಪಿ.ಎನ್. ಗಣೇಶ್ ಇವರಿಗೆ ಪರ್ವತಾರೋಹಣ ಸಾಹಸ ಕ್ರೀಡೆ ಬಗ್ಗೆ ‘ಗೋಲ್ಡ್ ಸ್ಟಾರ್’ ಪ್ರಶಸ್ತಿಯನ್ನು ಪ್ರದಾನಿಸುವ ಮೂಲಕ ಗೌರವಿಸಿದೆ.
ಬೆಂಗಳೂರಿನ ಪಂಚತಾರಾ ಹೋಟೇಲ್ ಹೌವಾರ್ಡ್ ಜೋನ್ಸನ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಅವರಿಗೆ ನೀಡಲಾಯ್ತು. ಗಣೇಶ್ ರವರು ಎವರೆಸ್ಟ್ ಶಿಖರವನ್ನು ಏರಿದ ದಕ್ಷಿಣ ಭಾರತದ ಮೊದಲ ವ್ಯಕ್ತಿ. ಮೂಲತ: ಉಡುಪಿ ಜಿಲ್ಲೆಯ ಪಡುಬಿದ್ರೆಯ ನಿವಾಸಿಯಾಗಿರುವ ಅವರು 192 ದೇಶಗಳ ಧ್ವಜಗಳನ್ನು ಶಿಖರದ ಮೇಲೆ ಸ್ಥಾಪಿಸಿದುದಲ್ಲದೆ ತಮ್ಮ ಜೊತೆಗೆ ಧಾರ್ಮಿಕ ಗ್ರಂಥಗಳಾದ ಭಗವದ್ಗೀತೆ, ಬೈಬಲ್, ಕುರಾನ್, ಗುರು ಗೋವಿಂದಸಾಬ್ ಜೈನ ಮತ್ತು ಬುದ್ಧ ಧರ್ಮಗಳ ಪವಿತ್ರ ಗ್ರಂಥಗಳನ್ನೂ ಕೊಂಡೊಯ್ದು ದಾಖಲೆಯನ್ನು ನಿರ್ಮಿಸಿದ್ದಾರೆ. ಅಲ್ಲದೆ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯದ ಧ್ವಜಗಳನ್ನೂ ಅಲ್ಲಿ ಸ್ಥಾಪಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೀವಿಂಗ್ ಆಫ್ ಆರ್ಟ್ ನ ಶ್ರೀ ಶ್ರೀ ರವಿಶಂಕರ ಗುರೂಜಿ, ಭಾರತೀಯ ವಿದೇಶಾಂಗ ಸೇವೆಯ ನಿವೃತ್ತ ರಾಯಭಾರಿ ಡಾ. ವಿ.ಬಿ. ಸೋನಿ, ಸೌತ್ ಇಂಡಿಯಾದ ಕೌನ್ಸ್ ಲೇಟ್ (ಪಾಕ್ ದೇಶ) ಆಸಿಫ್ ಇಕ್ಬಾಲ್, ಪೆರು ದೇಶದ ಡೆಲಿಗೇಟ್ಸ್ ವಿಕ್ರಂ ವಿಶ್ವನಾಥ್, ಟರ್ಕಿಯ ಭಾರತದ ಛೇಂಬರ್ ಆಫ್ ಕಾಮರ್ಸಿನ ಶ್ರೀಮರತ್, ನಿಕಟಪೂರ್ವ ಉಪಲೋಕಾಯುಕ್ತ ಚಂದ್ರಶೇಖರಯ್ಯ ಮತ್ತು ಚಂದರ್ ಪ್ರಭಾ ಫೌಂಡೇಶನ್ ನ ಸ್ಥಾಪಕರಾದ ಡಾ. ನೀರಜ್ ಎಶಮಾರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.