News Kannada
Wednesday, July 06 2022

ಕರಾವಳಿ

ಕುಡಿಯುವ ನೀರಿನ ಸಮಸ್ಯೆ: ಪುರಸಭಾ ಕಾರ್ಯಲಯಕ್ಕೆ ಮುತ್ತಿಗೆ - 1 min read

Photo Credit :

ಕುಡಿಯುವ ನೀರಿನ ಸಮಸ್ಯೆ: ಪುರಸಭಾ ಕಾರ್ಯಲಯಕ್ಕೆ ಮುತ್ತಿಗೆ

ಬಂಟ್ವಾಳ: ಕಳೆದ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದ  ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 3ರ ನಾಗರೀಕರು ಸೋಮವಾರ ಪುರಸಭಾ ಕಾರ್ಯಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.


ನೀರು ಪೂರೈಸುವ ಕೊಳವೆ ಬಾವಿ ಕೈಕೊಟ್ಟ ಹಿನ್ನಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಇಲ್ಲಿನ ಕುದನೆ ಗುಡ್ಡೆ, ಪಣೆಕಲ, ಮಣಿ ಮತ್ತಿತರ ಪರಿಸರದ ಜನರು ಕುಡಿಯಲು ಹಾಗೂ ದಿನಬಳಕೆ ನೀರಿಲ್ಲದೆ ಪರಿತಪಿಸಿದ್ದರು. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರ ಗಮನಕ್ಕೆ ತಂದಿದ್ದರೂ ಪರಿಹಾರ ಸಿಕ್ಕಿರಲಿಲ್ಲ. ಇದರಿಂದ ಆಕ್ರೋಶಗೊಂಡ ನಾಗರೀಕರು ಪುರಸಭೆ ಕಾರ್ಯಲಯದ ಮುಂದೆ ಧರಣಿ ಕೂತರು. ತಕ್ಷಣ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹೊಸ ಕೊಳವೆ ಬಾವಿ ಹಾಕಿಕೊಡುವಂತೆ ಪಟ್ಟು ಹಿಡಿದಿದ್ದರು. ಈ ಸಂದರ್ಭ ಪ್ರತಿಭಟನಾ ನಿರತರನ್ನು ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಸುದೀರ್ಘ ಕಾಲ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿ ನೀರು ಪೂರೈಕೆ ಮಾಡುವ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ. ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ಅವರೇ ಈ ವಾರ್ಡ್ ಅನ್ನು ಪ್ರತಿನಿಧಿಸುತ್ತಿದ್ದು ನಾಗರೀಕರು ಹಲವು ದಿನಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ಬಗೆಹರಿಸಲು ಪ್ರಯತ್ನಿಸದಿರುವುದೂ ನಾಗರಿಕರ ಕೋಪಕ್ಕೆ ಕಾರಣವಾಗಿದೆ.

ಪುರಸಭಾ ಸದಸ್ಯರಾದ ರಾಮಕೃಷ್ಣ ಆಳ್ವ, ಜಗದೀಶ ಕುಂದರ್, ಮುಖ್ಯಾಧಿಕಾರಿ ಸುಧಾಕರ, ಎಂಜಿನಿಯರ್ ಡಿಮೆಲ್ಲೋ, ಜನಾರ್ದನ ಚೆಂಡ್ತಿಮಾರ್, ವೆಂಕಪ್ಪ ಪೂಜಾರಿ, ವಿಶ್ವನಾಥ ಗೌಡ ಮಣಿ  ಮತ್ತಿತರರು ಹಾಜರಿದ್ದರು.

 

See also  ಬೆಳ್ತಂಗಡಿ: ಹೊಳೆ ಬದಿಯಲ್ಲಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು