ಕಾಸರಗೋಡು: ನಿಯಂತ್ರಣ ತಪ್ಪಿದ ಕಾರು ಬೈಕ್ ಗೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಕಳ್ನಾಡ್ ಕಟ್ಟಕಾಲ್ ನಲ್ಲಿ ಆದಿತ್ಯವಾರ ರಾತ್ರಿ ನಡೆದಿದೆ.
ಮೃತಪಟ್ಟವರನ್ನು ಅರಮ೦ಗಾನ ಉಲೂಚಿಯ ಸುಜಿತ್ (27) ಎಂದು ಗುರುತಿಸಲಾಗಿದೆ. ಸಹಸವಾರ ದೇಳಿ ಕುನ್ನುಪ್ಪಾರದ ರಜೀಶ್ ಯಾನೆ ರಾಜು ( 25) ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ನಗರದ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಚಾಲಕ ಜಂಶೀದ್ ( 22) ಮತ್ತು ಸಹೋದರಿ ಜ೦ಶಿ ( 20) ರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಜಿತ್ ಮತ್ತು ರಜೀಶ್ ಪಾಲಕುನ್ನು ವಿನಿಂದ ಮೇಲ್ಪರ೦ಬಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರಸ್ತೆಗೆಸೆಲ್ಪಟ್ಟ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ತಲುಪಿಸಿದರೂ ಸುಜಿತ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.