ಬಂಟ್ವಾಳ: ಜಿ.ಪಂ. ಹಾಗೂ ತಾ.ಪಂ.ಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಬಂಟ್ವಾಳ ತಾಲೂಕಿನಲ್ಲಿ ಕಾಂಗ್ರೇಸ್ ಮೇಲುಗೈ ಸಾಧಿಸಿದೆ. ಜಿ.ಪಂ.ನ 9 ಕ್ಷೇತ್ರಗಳ ಪೈಕಿ ಕಾಂಗ್ರೇಸ್ 5 ಹಾಗೂ ಬಿಜೆಪಿ 4 ಸ್ಥಾನಗಳಲ್ಲಿ ಜಯಭೇರಿ ಸಾಧಿಸಿದೆ. ತಾಲೂಕು ಪಂಚಾಯತ್ ನ 34 ಸ್ಥಾನಗಳ ಪೈಕಿ ಕಾಂಗ್ರೇಸ್ 22 ಹಾಗೂ ಬಿಜೆಪಿ 12ರಲ್ಲಿ ಗೆಲುವು ಸಾಧಿಸಿದ್ದು, ಬಂಟ್ವಾಳ ತಾಲೂಕು ಪಂಚಾಯತ್ ಆಡಳಿತ ಕಾಂಗ್ರೇಸ್ ನ ಕೈ ವಶವಾಗಿದೆ.
ಜಿ.ಪಂ. ಕ್ಷೇತ್ರದ ವಿಜೇತರ ವಿವರ: ಸಂಗಬೆಟ್ಟು -ತುಂಗಪ್ಪ ಬಂಗೇರ(ಬಿಜೆಪಿ), ಸರಪಾಡಿ- ಪದ್ಮಶೇಖರ್ ಜೈನ್(ಕಾಂಗ್ರೇಸ್), ಪುದು-ರವೀಂದ್ರ ಕಂಬಳಿ(ಬಿಜೆಪಿ), ಗೋಳ್ತಮಜಲು-ಕಮಲಾಕ್ಷಿ ಪೂಜಾರಿ(ಬಿಜೆಪಿ), ಮಾಣಿ – ಮಂಜುಳಾ ಮಾಧವ ಮಾವೆ(ಕಾಂಗ್ರೇಸ್), ಕೊಳ್ನಾಡು-ಎಂ.ಎಸ್.ಮಹಮ್ಮದ್(ಕಾಂಗ್ರೇಸ್), ಕುನರ್ಾಡು-ಮಮತಾಗಟ್ಟಿ(ಕಾಂಗ್ರೇಸ್), ಸಜಿಪಮುನ್ನೂರು -ಚಂದ್ರಪ್ರಕಾಶ ಶೆಟ್ಟಿ (ಕಾಂಗ್ರೇಸ್),ಪುಣಚ-ಜಯಶ್ರೀ ಕೋಡಂದೂರು(ಬಿಜೆಪಿ).
ತಾ.ಪಂ.ಕ್ಷೇತ್ರದ ವಿಜೇತರ ವಿವರ: ಸಂಗಬೆಟ್ಟು -ಪ್ರಭಾಕರ ಪ್ರಭು(ಕಾಂಗ್ರೇಸ್), ಚೆನ್ನೈತ್ತೋಡಿ- ರತ್ನಾವತಿ ಜಯರಾಮ ಶೆಟ್ಟಿ(ಕಾಂಗ್ರೇಸ್), ಪಿಲಾತಬೆಟ್ಟು-ರಮೇಶ್ ಕುಡ್ಮೇರು(ಬಿಜೆಪಿ), ರಾಯಿ-ಮಂಜುಳಾ ಸದಾನಂದ(ಕಾಂಗ್ರೇಸ್), ಪಂಜಿಕಲ್ಲು-ಪದ್ಮಾವತಿ ವಿ ಪೂಜಾರಿ(ಕಾಂಗ್ರೇಸ್), ಅಮ್ಟಾಡಿ-ಮಲ್ಲಿಕಾ ವಿ ಶೆಟ್ಟಿ(ಕಾಂಗ್ರೇಸ್), ಕಾವಳ ಮೂಡೂರು- ಧನಲಕ್ಷ್ಮೀ ಸಿ ಬಂಗೇರ(ಕಾಂಗ್ರೇಸ್), ಉಳಿ-ಬೇಬಿ(ಕಾಂಗೇಸ್), ಸರಪಾಡಿ-ಸ್ವಪ್ನ ವಿಶ್ವನಾಥ ಪೂಜಾರಿ(ಕಾಂಗ್ರೇಸ್), ಕರಿಯಂಗಳ-ಯಶವಂತ ಪೂಜಾರಿ(ಬಿಜೆಪಿ), ಅಮ್ಮುಂಜೆ-ಶಿವಪ್ರಸಾದ್ ಕನಪಾಡಿ(ಕಾಂಗ್ರೇಸ್), ತುಂಬೆ-ಗಣೇಶ್ ಸುವರ್ಣ( ಬಿಜೆಪಿ), ನರಿಕೊಂಬು-ಗಾಯತ್ರಿ ರವೀಂದ್ರ ಸಫಲ್ಯ(ಕಾಂಗ್ರೇಸ್), ಪುದು-ಪದ್ಮಶ್ರೀ ದುಗರ್ೇಶ್ ಶೆಟ್ಟಿ(ಕಾಂಗ್ರೇಸ್), ಸಜಿಪಮುನ್ನೂರು-ನಸೀಮ ಬೇಗಂ(ಕಾಂಗ್ರೆಸ್), ಕಡೇಶ್ವಾಲ್ಯ-ರಘು ಮಲ್ಲಡ್ಕ (ಬಿಜೆಪಿ),ಬಾಳ್ತಿಲ- ಲಕ್ಷ್ಮೀ ಗೋಪಾಲಾಚಾರ್ಯ (ಬಿಜೆಪಿ), ವೀರಕಂಭ-ಗೀತಾ ಚಂದ್ರಶೇಖರ(ಬಿಜೆಪಿ), ಸಜಿಪಮೂಡ- ಸಂಜೀವ ಪೂಜಾರಿ( ಕಾಂಗ್ರೆಸ್), ಸಜಿಪಪಡು-ಸವಿತ ಹೇಮಂತ ಕರ್ಕೇರಾ(ಕಾಂಗ್ರೆಸ್), ಗೋಳ್ತಮಜಲು- ಮಹಾಬಲ ಆಳ್ವ(ಬಿಜೆಪಿ), ಕುನರ್ಾಡು- ನವೀನ ಪೂಜಾರಿ(ಬಿಜೆಪಿ), ಬಾಳೆಪುಣಿ-ಹೈದರ್ ಕೈರಂಗಳ(ಕಾಂಗ್ರೆಸ್), ಮಂಚಿ- ಅಬ್ಬಾಸ್ ಅಲಿ(ಕಾಂಗ್ರೆಸ್), ಮಾಣಿ- ಮಂಜುಳಾ ಕುಶಲ( ಕಾಂಗ್ರೆಸ್), ಕೆದಿಲ-ಆದಂ ಕುಂಞಿ(ಕಾಂಗ್ರೆಸ್), ವಿಟ್ಲಪಡ್ನೂರು-ಶೋಭಾ ರೈ (ಕಾಂಗ್ರೆಸ್), ಇಡ್ಕಿದು- ವನಜಾಕ್ಷಿ ಬಿ.(ಬಿಜೆಪಿ), ಕೊಳ್ನಾಡು-ನಾರಾಯಣ ಶೆಟ್ಟಿ ಕಲ್ಯಾರು(ಬಿಜೆಪಿ), ನರಿಂಗಾಣ-ಚಂದ್ರಹಾಸ ಕರ್ಕೇರಾ(ಕಾಂಗ್ರೆಸ್), ಕನ್ಯಾನ- ಕುಮಾರ ಭಟ್ ಬದಿಕೋಡಿ(ಕಾಂಗ್ರೆಸ್), ಕರೋಪಾಡಿ- ಉಸ್ಮಾನ್ ಕರೋಪಾಡಿ( ಕಾಂಗ್ರೆಸ್), ಪೆರುವಾಯಿ-ಪದ್ಮನಾಭ ನಾಯ್ಕ(ಬಿಜೆಪಿ), ಪುಣಚ- ಕವಿತಾ ಎಸ್.ನಾಯಕ್(ಬಿಜೆಪಿ).
ಮಾಜಿ ಶಾಸಕರಿಗೆ ಸೋಲು
ಜಿಲ್ಲೆಯ ಗಮನಸೆಳೆದಿದ್ದ ತಾಲೂಕಿನ ಸಜಿಪಮುನ್ನೂರು ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಚಂದ್ರಪ್ರಕಾಶ ಶೆಟ್ಟಿಯವರು ಬಿಜೆಪಿಯ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ವಿರುದ್ದ 2 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ತನ್ಮೂಲಕ ಪ್ರಕಾಶ್ ಶೆಟ್ಟಿಯವರು ಎರಡನೇ ಬಾರಿಗೆ ಜಿಪಂ ಪ್ರವೇಶ ಪಡೆದಿದ್ದಾರೆ. ಸರಪಾಡಿ ಜಿಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮಶೇಖರ ಜೈನ್ ಅವರು ತಾಲೂಕಿನಲ್ಲೇ ಅತ್ಯಧಿಕ (4352)ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ.
ಜಿ.ಪಂ. ತಾ.ಪಂ.ನಲ್ಲಿ ಒಟ್ಟು 6278 ನೋಟಾ ಚಲಾವಣೆ:
ಎತ್ತಿನ ಹೊಳೆ ಯೋಜನೆಗೆ ವಿರೋಧ ದ ಜೊತೆಯಲ್ಲಿ ಅಭ್ಯರ್ಥಿಗಳ ಕುರಿತಾಗಿ ಅಸಮಾಧಾನ ಎಂಬಂತೆ ಬಂಟ್ವಾಳ ತಾಲೂಕಿನಲ್ಲಿ ಅತೀ ಹೆಚ್ಚು ನೋಟಾ ಮತ ಚಲಾವಣೆಯಾಗಿದೆ. ತಾಪಂ ಕ್ಷೇತ್ರಗಳಿಗೆ ಸಂಬಂಧಿಸಿ 2950 ಹಾಗೂ ಜಿ.ಪಂ.ಕ್ಷೇತ್ರ ವ್ಯಾಪ್ತಿಯಲ್ಲಿ 3328 ಸೇರಿದಂತೆ ಒಟ್ಟು ತಾಲೂಕಿನಲ್ಲಿ 6278 ನೋಟಾ ಮತಗಳು ಚಲಾವಣೆಯಾಗುವ ಮೂಲಕ ರಾಜಕೀಯ ಪಕ್ಷಗಳ ಬೆವರಿಳಿಸಿದೆ. ಸಂಗಬೆಟ್ಟು ಜಿ.ಪಂ. ಕ್ಷೇತ್ರದಲ್ಲಿ 563, ಸರಪಾಡಿ 358,ಪುದು-246, ಗೋಳ್ತಮಜಲು-580, ಮಾಣಿ-375, ಕೊಳ್ನಾಡು-144, ಕುರ್ನಾಡು-317, ಸಜಿಪಮುನ್ನೂರು-211, ಪುಣಚ ಜಿ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ 534 ನೋಟಾ ಮತಗಳು ಚಲಾವಣೆಯಾಗಿದೆ.
ತಾ.ಪಂ ಕ್ಷೇತ್ರಗಳ ಪೈಕಿ ಪುಣಚ ಕ್ಷೇತ್ರದಲ್ಲಿ 189, ಇಡ್ಕಿದು 206, ಚೆನ್ನೈತ್ತೋಡಿ 94, ಬಾಳ್ತಿಲ -103, ಪಂಜಿಕಲ್ಲು-138, ಕಾವಳ ಮೂಡೂರು-118, ಕರಿಯಂಗಳ-108, ಅಮ್ಮುಂಜೆ-141, ಉಳಿ-145, ಸರಪಾಡಿ ಕ್ಷೇತ್ರದಲ್ಲಿ 116 ನೋಟಾ ಮತಗಳು ಚಲಾವಣೆಯಾಗಿದೆ. ಉಳಿದಂತೆ ಎಲ್ಲಾ ತಾ.ಪಂ ಕ್ಷೇತ್ರಗಳಲ್ಲೂ ನೋಟಾ ಚಲಾವಣೆಯಾಗಿದ್ದು, ಅಂಚೆ ಮತಗಳ ಪೈಕಿ ತಾ.ಪಂ.ಗೆ 9 ಹಾಗೂ ಜಿ.ಪಂ. ಗೆ 5 ನೋಟಾ ಮತಗಳು ಚಲಾವಣೆಯಾಗಿದೆ.
ತಾಲೂಕಿನ ಒಟ್ಟು ಫಲಿತಾಂಶದಲ್ಲಿ ಕಾಂಗ್ರೇಸ್ ಮುನ್ನಡೆ ಸಾಧಿಸಿದ್ದು, ಮತ ಎಣಿಕೆ ಕೇಂದ್ರದ ಆವರಣದಲ್ಲಿಯೇ ಕಾಂಗ್ರೇಸ್ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಪಕ್ಷಗಳ ಕಾರ್ಯಕರ್ತರು, ಮುಖಂಡರು ಹಾರ ಹಾಕಿ ಅಭಿನಂದನೆ ಸಲ್ಲಿಸಿ ಸಂಭ್ರಮಿಸುತ್ತಿದ್ದ ದೃಶ್ಯಗಳು ಕಂಡು ಬಂತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮತಎಣಿಕಾ ಕೇಂದ್ರಕ್ಕೆ ಆಗಮಿಸಿ ಪಕ್ಷದ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು. ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಗುರುತಿಸಿರುವ ಮತದಾರ ಕಾಂಗ್ರೇಸ್ ಅನ್ನು ಬೆಂಬಲಿಸಿದ್ದಾರೆ. ಅಭಿವೃದ್ದಿ ಕಾರ್ಯಕ್ಕೆ ಮತ್ತಷ್ಟು ಶಕ್ತಿ ಬಂದಿದೆ ಎಂದವರು ತಿಳಿಸಿದರು. ಮತೆಣಿಕಾ ಕೇಂದ್ರಕ್ಕೆ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರುಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ಉಳಿದಂತೆ ಎಲ್ಲಾ ಪಕ್ಷಗಳ ಕಾರ್ಯಕರ್ತರನ್ನು ಮೊಡಂಕಾಪು ಪೊಳಲಿ ರಸ್ತೆಯಲ್ಲೇ ತಡೆ ಹಿಡಿಯಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಅವರು ಮತ ಎಣಿಕಾ ಕೇಂದ್ರದಲ್ಲಿದ್ದು ಬಂದೋಬಸ್ತ್ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ಇನ್ಸ್ಪೆಕ್ಟರ್ ಬೆಳ್ಳಿಯಪ್ಪರವರ ನೇತೃತ್ವದಲ್ಲಿ ಎಸ್ಸೈಗಳಾದ ನಂದಕುಮಾರ್, ರಕ್ಷಿತ್ ಎ.ಕೆ., ಚಂದ್ರಶೇಕರಯ್ಯ ಮತ್ತು ಅವರ ಸಿಬ್ಬಂದಿಗಳು ಬಂದೋಬಸ್ತ್ ಏರ್ಪಡಿಸಿದ್ದರು. ಚುನಾವಣಾಧಿಕಾರಿ, ಮಂಗಳೂರು ಸಹಾಯಕ ಕಮಿಷನರ್ ಡಾ. ಅಶೋಕ್, ತಹಶೀಲ್ದಾರ್ ಪುರದಂರ ಹೆಗಡೆರವರು ಉಪಸ್ಥಿತರಿದ್ದರು. ನಿಗದಿತ ಸಮಯ ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಆರಂಭಗೊಂಡಿದ್ದು 11 ಗಂಟೆಯ ಹೊತ್ತಿಗೆ ಜಿಪಂನ 9 ಹಾಗೂ ತಾಪಂನ 34 ಸ್ಥಾನಗಳ ಎಣಿಕಾ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಂಡು ಫಲಿತಾಂಶವು ಪ್ರಕಟಗೊಂಡಿದೆ. ಮತ ಎಣಿಕೆಯ ಆವರಣ ಕೇಂದ್ರದಿಂದ ಹೊರ ಭಾಗದ ರಸ್ತೆಯಲ್ಲಿ ವಿಜೇತರನ್ನು ಆಯಾಯ ಪಕ್ಷದ ಕಾರ್ಯಕರ್ತರು ಎತ್ತಿಕೊಂಡು ಪಟಾಕಿ ಸಿಡಿಸಿ ಸಿಹಿ ಅಂಚಿ ಸಂಭ್ರಮ ಆಚರಿಸಿದರು. ಬಳಿಕ ತಮ್ಮ ಕ್ಷೇತ್ರಕ್ಕೆ ಕರೆದೊಯ್ದು ವಿಜಯೋತ್ಸವವನ್ನು ಆಚರಿಸಿದರು.
ಸೋತ ಪ್ರಮುಖರು: ಜಿಪಂನ ಮಾಜಿ ಅಧ್ಯಕ್ಷೆ ಶೈಲಾಜ ಕೆ.ಟಿ. ಭಟ್ ಅವರು ಈ ಬಾರಿ ಮಾಣಿ ಜಿಪಂ ಕ್ಷೇತ್ರದಲ್ಲಿ ಸಾಲೆತ್ತೂರು ಗ್ರಾಪಂ ಅಧ್ಯಕ್ಷೆ ಕಾಂಗ್ರೆಸ್ನ ಮಂಜುಳಾ ಮಾಧವ ಮಾವೆ ಅವರ ವಿರುದ್ಧ ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಹಾಗೆಯೇ ತಾಲೂಕಿನ ಪ್ರತಿಷ್ಠಿತ ಕ್ಷೇತ್ರವೆಂದೇ ಬಿಂಬಿತವಾಗಿದ್ದ ಸಜಿಪಮುನ್ನೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಪುದು ಜಿಪಂ ಮಾಜಿ ಸದಸ್ಯ ಎಮ್.ಉಮರ್ ಫಾರೂಕ್ ರವರು ಸೋಲನ್ನು ಅನುಭವಿಸಿದ್ದಾರೆ.
ಗೆದ್ದ ಪ್ರಮುಖರು: ಜಿಪಂ ಹಾಲಿ ಸದಸ್ಯರಾದ ಎಮ್.ಎಸ್.ಮುಹಮ್ಮದ್, ಮಮತಾ ಗಟ್ಟಿ ಗೆಲುವು ಸಾಧಿಸುವುದರೊಂದಿಗೆ ಮೂರನೆ ಬಾರಿಗೆ ಜಿಪಂ ಪ್ರವೇಶಿಸಿದ್ದಾರೆ. ಮಾಜಿ ಉಪಾಧ್ಯಕ್ಷೆ ಜಯಶ್ರೀ ಕೊಡಂದೂರು ಅವರು ನೂತನವಾಗಿ ಅಸ್ಥಿತ್ವಕ್ಕೆ ಬಂದ ಪುಣಚ ಕ್ಷೇತ್ರದಿಂದ ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಎರಡನೇ ಬಾರಿಗೆ ಜಿಪಂ ಪ್ರವೇಶಿಸಿದ್ದಾರೆ.
ತಾಪಂನಿಂದ ಜಿಪಂಗೆ: ಬಂಟ್ವಾಳ ತಾಪಂ ಹಾಲಿ ಸದಸ್ಯರಾದ ಕಮಲಾಕ್ಷಿ ಕೆ. ಪೂಜಾರಿ ಹಾಗೂ ಪದ್ಮಶೇಖರ್ ಜೈನ್ ಅವರು ಈ ಬಾರಿ ಜಿಪಂ ಚುನಾವಣೆಗೆ ಸ್ಪರ್ಧಿಸಿದ್ದ ಪ್ರಮುಖರಾಗಿದ್ದು, ಇವರಿಬ್ಬರು ಕೂಡಾ ಭರ್ಜರಿ ಗೆಲುವನ್ನು ದಾಖಲಿಸಿ, ಜಿ.ಪಂ ಗೆ ಪ್ರವೇಶ ಪಡೆದಿದ್ದಾರೆ.
ತಾಪಂ ಕಾಂಗ್ರೆಸ್ ತೆಕ್ಕೆಗೆ: ತಾಪಂ ಅಸ್ತಿತ್ವಕ್ಕೆ ಬಂದ ಬಳಿಕ ತಲಾ ಎರೆಡೆರಡು ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತ ನಡೆಸಿತ್ತು. 2016ರ ತಾಪಂ ಚುನಾವಣೆಯಲ್ಲಿ ತಾಪಂ ಆಡಳಿತ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಆಡಳಿತದ ಚಿಕ್ಕಾಣಿ ಹಿಡಿದಿದೆ. 34 ಸ್ಥಾನಗಳ ಪೈಕಿ 22 ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿದ್ದು, ಬಿಜೆಪಿ ಕೇವಲ 12 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಂಡಿದೆ. ಹಾಲಿ ಸದಸ್ಯ ರಮೇಶ್ ಕುಡ್ಮೇರು ಎರಡನೇ ಬಾರಿಗೆ ತಾಪಂ ಪ್ರವೇಶಿಸಿದ ಏಕೈಕ ಸದಸ್ಯರಾಗಿದ್ದಾರೆ. ಉಳಿದಂತೆ ಈ ಬಾರಿ ಬಹುತೇಕವಾಗಿ ಹೊಸ ಮುಖಗಳೇ ತಾಪಂಅನ್ನು ಪ್ರವೇಶಿಸಿವೆ.
ಸೋತ ಪ್ರಮುಖರು: ಹಾಲಿ ಅಧ್ಯಕ್ಷ ಯಶವಂತ ದೇರಾಜೆ, ಉಪಾಧ್ಯಕ್ಷೆ ವಿಲಾಸಿನಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಮಾಜಿ ಉಪಾಧ್ಯಕ್ಷ ಉಮರ್ ಪಜೀರ್, ಕಂಬಳ ತೀರ್ಪುಗಾರ ರಾಜುವ ಶೆಟ್ಟಿ ಎಡ್ತೂರು ಅವರು ಸೋಲನ್ನು ಅನುಭವಿಸಿದ್ದಾರೆ.
ಗೆದ್ದ ಪ್ರಮುಖರು: ಮಾಜಿ ಉಪಾಧ್ಯಕ್ಷರಾದ ಚಂದ್ರಾಹಾಸ್ ಕರ್ಕೇರ, ಉಸ್ಮಾನ್ ಕರಪಾಡಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಭೂ ಬ್ಯಾಂಕ್ನ ಉಪಾಧ್ಯಕ್ಷ ಸಂಜೀವ ಪೂಜಾರಿ, ಸಂಗಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಪ್ರಭಾಕರ್ ಪ್ರಭು, ಜಿಪಂ ಮಾಜಿ ಸದಸ್ಯ ಧನಲಕ್ಷ್ಮಿ ಬಂಗೇರ, ಬಂಟ್ವಾಳ ತಾಲೂಕು ಗ್ಯಾರೇಜ್ ಮಾಲಕ ಸಂಘದ ಮಾಜಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಅವರು ಗೆಲುವು ಸಾಧಿಸಿದ ಪ್ರಮುಖರಾಗಿದ್ದಾರೆ.
ಖಾತೆ ತೆರೆಯದ ಜೆಡಿಎಸ್, ಎಸ್ಡಿಪಿಐ:
ಜಿ.ಪಂ.ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಎಸ್ಡಿಪಿಐ, ಜೆಡಿಎಸ್, ಸಿಪಿಐಎಂ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧೆ ನೀಡಿದ್ದರೂ ಖಾತೆ ತೆರೆಯುವಲ್ಲಿ ವಿಫಲರಾಗಿದ್ದಾರೆ. ಎಸ್ಡಿಪಿಐ ಜಿ.ಪಂ ಕ್ಷೇತ್ರದಲ್ಲಿ 2 ಹಾಗೂ ತಾಲೂಕು ಪಂಚಾಯಿತಿನ 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಜೆಡಿಎಸ್ 2 ಜಿ.ಪಂ. ಕ್ಷೇತ್ರ ಹಾಗೂ 6 ತಾ.ಪಂ. ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಸಿಪಿಐ ಕೂಡ ಸ್ಪರ್ಧಿಸಿತ್ತು. ಮಂದಿ ಪಕ್ಷೇತರರು ಕೂಡ ಸ್ಪರ್ಧೆ ನೀಡಿದ್ದರು. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಹೊರತು ಪಡಿಸಿ ಇತರ ಯಾವುದೇ ಪಕ್ಷಗಳು ಕೂಡ ಖಾತೆ ತೆರಯಲು ಸಾಧ್ಯವಾಗಿಲ್ಲ. ಪುದು ಕ್ಷೇತ್ರದಲ್ಲಿ ಎಸ್ಡಿಪಿಐ ಗಳಿಸಿರುವ 4ಸಾವಿರಕ್ಕೂ ಅಧಿಕ ಮತಗಳು ಕಾಂಗ್ರೇಸ್ ಸೋಲಿಗೆ ಕಾರಣ ಎಂಬ ಅಭಿಪ್ರಾಯ ಕೇಳಿ ಬಂದಿದೆ.