ಕಾಸರಗೋಡು: ಪತ್ನಿ ವಿಷ ಸೇವಿಸಿ ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿಯನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮುಟ್ಟತ್ತೋಡಿ ಪೊಡಿಪಲ್ಲದ ಅಬ್ದುಲ್ ರಜಾಕ್ (39) ಎಂದು ಗುರುತಿಸಲಾಗಿದೆ. ಪತ್ನಿ ಸಾಜಿದಾ (27) ಮೃತಪಟ್ಟ ಘಟನೆಗೆ ಸಂಬಂಧಪಟ್ಟ೦ತೆ ಈತನನ್ನು ಬಂಧಿಸಲಾಗಿದೆ. 2015ರ ಅಕ್ಟೋಬರ್ ಆರರಂದು ಏಳು ವರ್ಷದ ಪುತ್ರ ಮುಹಮ್ಮದ್ ಕಲಂದರ್ ಗೆ ವಿಷ ನೀಡಿ ಬಳಿಕ ಆಕೆ ವಿಷ ಸೇವಿಸಿದ್ದು, ಗಂಭೀರ ಸ್ಥಿತಿಯಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದರೂ ಅಕ್ಟೋಬರ್ 18ರಂದು ಸಾಜಿದಾ ಮೃತಪಟ್ಟಿದ್ದರು. ಪತಿಯ ಕಿರುಕುಳದಿಂದ ಪುತ್ರನಿಗೆ ವಿಷ ಉಣಿಸಿ ಆತ್ಮಹತ್ಯೆಗೈದಿರುವುದಾಗಿ ತನಿಖೆಯಿಂದ ತಿಳಿದು ಬಂದಿತ್ತು. ಇದರಂತೆ ಆರೋಪಿಯಾಗಿರುವ ಪತಿ ಅಬ್ದುಲ್ ರಜಾಕ್ ನನ್ನು ಪೊಲೀಸರು ಬಂಧಿಸಿದ್ದಾರೆ.