ಕಾಸರಗೋಡು: ವಿದ್ಯಾರ್ಥಿಗಳಿಗೆ ವಿತರಿಸಲೆಂದು ತರಲಾಗುತ್ತಿದ್ದ ಗಾಂಜಾ ಸಹಿತ ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕುಂಬಳೆ ಕೊಯಿಪ್ಪಾಡಿಯ ಮನವ್ವರ್ ಕಾಸಿಂ (22) ಎಂದು ಗುರುತಿಸಲಾಗಿದೆ. ಈತನಿಂದ ಎಂಭತ್ತು ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಹಳೆ ಬಸ್ಸು ನಿಲ್ದಾಣ ಪರಿಸರದಿಂದ ಈತನನ್ನು ಬಂಧಿಸಲಾಯಿತು.
ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದುದ್ದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ. ಕಾಸಿಂ ಈ ಹಿಂದೆಯೂ ಗಾಂಜಾ ಪ್ರಕರಣ ದಲ್ಲಿ ಈತನನ್ನು ಬಂಧಿಸಲಾಗಿತ್ತು. ನಾಲ್ಕು ವರ್ಷಗಳ ಹಿಂದೆ ನಗರ ಹೊರವಲಯದ ಅಣ೦ಗೂರಿನಲ್ಲಿ ಮದ್ಯದಂಗಡಿ ಬಾಗಿಲು ಮುರಿದು ಕಳವು ಗೈದ ಪ್ರಕರಣದ ಆರೋಪಿಯಾಗಿದ್ದಾನೆ.